04/04/2023
https://m.facebook.com/story.php?story_fbid=599198095559154&id=100064069056205&mibextid=Nif5oz
ಪ್ರಿಯ ಬಂಧುಗಳೇ,
ನಿಮ್ಮ ಮಕ್ಕಳಿಗೆ ವಾರ್ಷಿಕ ಪರೀಕ್ಷೆಗಳೆಲ್ಲ ಮುಗಿದಿರಬೇಕು. ಬೇಸಿಗೆ ರಜಾ ದಿನಗಳನ್ನು ಖುಷಿ ಖುಷಿಯಾಗಿ ಕಳೆಯಲು ಕನಸು ಕಾಣುತ್ತಿರಬೇಕು. ಪಾಠ, ಪ್ರವಚನ, ಟ್ಯೂಷನ್, ಪರೀಕ್ಷೆ, ಸ್ಕೂಲ್ ಬಸ್ಸು, ಸಮವಸ್ತ್ರ, ಭಾರವಾದ ಪುಸ್ತಕದ ಚೀಲ ಹೀಗೆ ವರ್ಷಪೂರ್ತಿ ಒತ್ತಡದಲ್ಲಿ ದಣಿದ ಮಕ್ಕಳಿಗೆ ಒಂದಷ್ಟು ದಿನ ಸ್ವಚ್ಛಂದವಾದ ವಿಶ್ರಾಂತಿ ಬೇಕೇ ಬೇಕೆನಿಸುತ್ತದೆ.
ಕೋವಿಡ್ ಸಂಕ್ರಾಮಿಕದ ಕಾರಣ ಕಳೆದೆರಡು ವರ್ಷ ನಾವು ಶಿಬಿರ ಮಾಡಿರಲಿಲ್ಲ. ಈ ವರ್ಷ ಏಪ್ರಿಲ್ 15ರಿಂದ 24 ರವರೆಗೆ ಹತ್ತು ದಿನದ ಶಿಬಿರ ನಡೆಸುವ ತಯಾರಿ ನಡೆದಿದೆ.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಮ್ಮ ಹೋಂಸ್ಟೇ ಇದೆ. ಸುತ್ತಲಿನ ಕಾಡು, ಬೆಟ್ಟ ಗುಡ್ಡಗಳಲ್ಲಿ, ಹೊಳೆಹಳ್ಳಗಳಲ್ಲಿ ಮಕ್ಕಳಿಗೆ ನಿಸರ್ಗದ ನೈಜ ಪಾಠವನ್ನು ಮಾಡುತ್ತೇವೆ. ನಮ್ಮ ಶಿಬಿರದಲ್ಲಿ ಪೂರ್ವ ನಿಯೋಜಿತ ವೇಳಾಪಟ್ಟಿ ಇರುವುದಿಲ್ಲ. ಮುಂಜಾನೆ ಏಳುವ ಸಮಯದಿಂದ ರಾತ್ರಿ ಮಲಗುವ ಸಮಯದವರೆಗೂ ಎಲ್ಲಾ ಚಟುವಟಿಕೆಗಳನ್ನು ಮಕ್ಕಳೇ ನಿರ್ಣಯಿಸಬೇಕು. ಊಟ, ತಿಂಡಿ, ಆಟಗಳಲ್ಲೂ ಅವರದ್ದೇ ಆಯ್ಕೆ.
ತಂದೆ ತಾಯಿ ಜೊತೆ ಮಾತಾಡಲು ಪ್ರತಿದಿನ ರಾತ್ರಿ 8 ರಿಂದ 9 ರವರೆಗೆ ವೈಫೈ ಸಂಪರ್ಕ ಕೊಡುತ್ತೇವೆ.
ಶಿಬಿರದ ವೇಳೆಯಲ್ಲಿ ಯಾವುದೇ ಒಂದು ದಿನ ತಂದೆ-ತಾಯಿ ಪೋಷಕರು, ಮಕ್ಕಳ ಜೊತೆಯಲ್ಲಿದ್ದು ಹೋಗಬಹುದು. (ಯಾವುದೇ ಶುಲ್ಕ ಇರುವುದಿಲ್ಲ) ಪ್ರತಿ ಮಗುವಿಗೆ ಒಂದು ದಿನಕ್ಕೆ ರೂಪಾಯಿ 500ನ್ನು ಶಿಬಿರದ ಕೊನೆಯ ದಿನ ಪಾವತಿಸಬೇಕು. ಶಿಬಿರಕ್ಕೆ ಬಂದ ಮಕ್ಕಳ ಯೋಗ ಕ್ಷೇಮದ ಬಗ್ಗೆ ನಿಮಗೆ ಯಾವ ಚಿಂತೆಯೂ ಬೇಡ. ನಾವು ಪ್ರತಿ ದಿನ ಕಾಳಜಿಯಿಂದ ನೋಡಿಕೊಳ್ಳುತ್ತೇವೆ.
ಬಹುತೇಕ ಮಕ್ಕಳು ರಜಾ ದಿನಗಳಲ್ಲಿ ಅಜ್ಜ, ಅಜ್ಜಿ, ಅತ್ತೆ ಮಾವಂದಿರ ಮನೆಗಳಲ್ಲಿ ಆಟವಾಡಿ ಬಗೆಬಗೆ ತಿಂಡಿ ತಿನಿಸುಗಳನ್ನು ತಿಂದು ಸುಖವಾಗಿ ಕಳೆಯ ಬಯಸುತ್ತಾರೆ. ಅದೇ ಖುಷಿಯನ್ನು ತುಂಬಾ ಜನ ಮಕ್ಕಳು ಒಟ್ಟಿಗೆ ಸೇರಿ ಅನುಭವಿಸುವಂತೆ ಮಾಡುವ ಪ್ರಯತ್ನ ನಮ್ಮದು.
ನಿಮ್ಮ ತವರು ಮನೆಯಿಂದ,
ಪದ್ಮನಾಭ ಹೆಗಡೆ
ನಾಗವೇಣಿ ಹೆಗಡೆ
ತವರು ಮನೆ ಹೋಂಸ್ಟೇ, ಜಾಜಿಗುಡ್ಡೆ, ಶಿರಸಿ
9481589037