17/11/2021
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೀರ್ಜನ್ ಎಂಬಲ್ಲಿರುವ ಮೀರ್ಜನ್ ಕೋಟೆಯು ಕುಮುಟ-ಗೋಕರ್ಣ ರಾಷ್ಟ್ರೀಯ ಹೆದ್ದಾರಿ ೬೬ (ಹಿಂದಿನ ರಾ.ಹೆ ಸಂಖ್ಯೆ ೧೭)ರಲ್ಲಿ ಗೋಕರ್ಣದಿಂದ ೯ ಕಿ.ಮೀ ದಕ್ಷಿಣಕ್ಕೆ ಹೆದ್ದಾರಿಯಿಂದ ಪಶ್ಚಿಮ ದಿಕ್ಕಿನಲ್ಲಿ ಸುಮಾರು ೦.೫ ಕಿ.ಮೀ ದೂರದಲ್ಲಿ ಅಘನಾಶಿನಿ ನದಿಯ ದಂಡೆಯ ಮೇಲೆ ನಿರ್ಮಾಣವಾಗಿದೆ.
📸
ಶೈಲಿ ದಖ್ಖಣ ಮತ್ತು ಮೊಗಲ್ ವಾಸ್ತು ಶೈಲಿಗಳ ಮಿಶ್ರಣಸ್ಥಳದ ಮಾಹಿತಿಇವರ ಹಿಡಿತದಲ್ಲಿದೆಕರ್ನಾಟಕ ಸರ್ಕಾರಇವರಿಗೆ ಮುಕ್ತವಾಗಿದೆ
ಸಾರ್ವಜನಿಕರಿಗೆವೀಕ್ಷಣೆಗೆ ತೆರೆದಿದೆ.ಪರಿಸ್ಥಿತಿಅವಶೇಷಗಳುಸ್ಥಳದ ಇತಿಹಾಸಕಟ್ಟಿದ್ದು16ನೆಯ ಶತಮಾನದಲ್ಲಿ ಕಟ್ಟಿದ್ದು ಮುಂದೆ 17 ನೆಯ ಶತಮಾನದಲ್ಲಿ ನವೀಕರಣಗೊಂಡಿದೆ.ಕಟ್ಟಿದವರು ರಾಣಿ ಚನ್ನ ಬೈರಾದೇವಿ
ಕರಿಮೆಣಸು(ಪೆಪ್ಪರ್) ರಾಣಿ ಎಂದೇ ಪ್ರಖ್ಯಾತಳಾಗಿರುವ ಗೇರುೊಪ್ಪೆಯ ರಾಣಿ ಚೆನ್ನಭೈರಾದೇವಿ ಈ ಕೋಟೆಯನ್ನು ೧೬೦೮-೧೬೪೦ರ ನಡುವೆ ಕಟ್ಟಿದಳು ಎಂದು ನಂಬಲಾಗಿದೆ.