23/06/2019
ಎಚ್‌ಆರ್‌ಟಿಸಿಯ ದೆಹಲಿಯಿಂದ ಲೇಹ್ ಬಸ್ ಸೇವೆ:
1072 ಕಿಲೋಮೀಟರ್ ಉದ್ದದ ದೆಹಲಿ - ಲೇಹ್ ಹೆದ್ದಾರಿಯಲ್ಲಿ ಎಚ್‌ಆರ್‌ಟಿಸಿಯ ಬಸ್ ಸೇವೆ ಪುನರಾರಂಭವಾಗಿದೆ. ದೆಹಲಿಯ ಬಿಸಿಲ ಬಯಲು ಪ್ರದೇಶದಿಂದ ಶುರುವಾಗಿ, 17,000 ಅಡಿ ಎತ್ತರದ ಪರ್ವತಗಳ ಮೈ ಕೊರೆಯುವ ಹಾದಿಗಳ ಮೂಲಕ ಹಾದುಹೋಗಿ 35 ಗಂಟೆಗಳ ರಸ್ತೆ ಪ್ರಯಾಣ ನಂತರ ಲೇಹ್ ತಲುಪುತ್ತದೆ.
ಬಸ್ ವಿವರಗಳು:
ದಾರಿ : ದೆಹಲಿ - ಚಂಡೀಗಡ್ - ಬಿಲಾಸ್ಪುರ್ - ಮಂಡಿ - ಕುಲ್ಲು - ಮನಾಲಿ - ಕೀಲಾಂಗ್ - ಸರ್ಚು - ಪಾಂಗ್ - ಉಪ್ಶಿ - ಲೇ
ದೂರ: 1072 ಕಿ.ಮೀ
ದರ : ~ ₹ 1500 /
ಬಸ್ ಮಾದರಿ : ಟಾಟಾ ಸಾಮಾನ್ಯ 2 * 3 (47 ಆಸನಗಳು)
ಹೋಗುವಾಗ ಮತ್ತು ಬರುವಾಗ ರಾತ್ರಿಯಿಡೀ ಕೀಲಾಂಗ್ ನಲ್ಲಿ ಬಸ್ಸು ನಿಲ್ಲಿಸಲಾಗುತ್ತದೆ. ಬಸ್ ನಿಲ್ದಾಣದ ಬಳಿ ಅಗ್ಗದ ವಸತಿ ಸಿಗುತ್ತದೆ. ವಸತಿಯಲ್ಲಿ ಉಳಿದುಕೊಳ್ಳುವ ದರವನ್ನು ನೀವೇ ಕೊಡಬೇಕು. ಇದು ಬಸ್ ದರದಲ್ಲಿ ಒಳಗೊಂಡಿಲ್ಲ.
ಪ್ರಯಾಣದಲ್ಲಿ ಸಿಗುವ ಎತ್ತರದ ಪರ್ವತ ಹಾದಿಗಳು : ರೋಹ್ಟಾಂಗ್ ಲಾ, ಬರಲಾಚಾ ಲಾ, ನಾಕಿ ಲಾ, ಲಾಚುಂಗ್ ಲಾ, ತಾಂಗ್ಲಾಂಗ್ ಲಾ
ಕಾಯ್ದಿರಿಸುವುದು ಹೇಗೆ?
ಮುಂದಿನ ದಿನಗಳಲ್ಲಿ ಆನ್‌ಲೈನ್ ಕಾಯ್ದಿರಿಸುವಿಕೆ www.hrtchp.com ನಲ್ಲಿ ಮಾಡಬಹುದು..
ಸದ್ಯಕ್ಕೆ ಮನಾಲಿ ತನಕ ಕಾಯ್ದಿರಿಸಬಹುದು.
ವೇಳಾಪಟ್ಟಿ: ದೆಹಲಿಯಿಂದ- ಮಧ್ಯಾಹ್ನ 2: 30 | ಚಂಡೀಗಡ್ ಸೆಕ್ಟರ್ 43- ರಾತ್ರಿ 8:30 ರಿಂದ । ಕುಲ್ಲು ನಿಂದ - ಬೆಳಿಗ್ಗೆ 5:15 | ಮನಾಲಿಯಿಂದ- ಬೆಳಿಗ್ಗೆ 7:00 ರಿಂದ. ಕೀಲಾಂಗ್‌ನಲ್ಲಿ ಮಧ್ಯಾಹ್ನ 1:00 --- --- ರಾತ್ರಿಯ ನಿಲುಗಡೆ --- ಕೀಲಾಂಗ್‌ನಿಂದ- ಬೆಳಿಗ್ಗೆ 5:00 | ಲೇಹ್- ಸಂಜೆ 7:00.
ಲೇಹ್- ಬೆಳಿಗ್ಗೆ 5:00 ರಿಂದ | ಕೀಲಾಂಗ್ - ಸಂಜೆ 7:00 --- --- ರಾತ್ರಿಯ ನಿಲುಗಡೆ --- ಕೀಲಾಂಗ್‌ನಿಂದ- ಬೆಳಿಗ್ಗೆ 6:30 | ಮನಾಲಿಯಿಂದ- ಮಧ್ಯಾಹ್ನ 1:25 ದೆಹಲಿಯಲ್ಲಿ- ಮುಂಜಾನೆ 3: 30 ಕ್ಕೆ. .
ಊಟ - ತಿಂಡಿ ನಿಲುಗಡೆಗಳು:
ಸಂಜೆ ತಿಂಡಿ : ಕರ್ನಾಲ್, ರಾತ್ರಿ । ಊಟ : ರೋಪರ್ । ಮುಂಜಾನೆ ವಿರಾಮ: ಪಾಂಡೋ । ಬೆಳಗಿನ ತಿಂಡಿ : ಗುಲಾಬಾ । ಊಟ : ಕೊಕ್ಸರ್ । ಬೆಳಗಿನ ತಿಂಡಿ : ಬಾರಾಲಾಚಾ ಲಾ ಬಳಿ ಭರತ್‌ಪುರ । ಊಟ : ಪಾಂಗ್ । ಸಂಜೆ ತಿಂಡಿ: ಉಪ್ಶಿ
ಬಸ್ ಸಾಮಾನ್ಯವಾಗಿ ಪ್ರಮುಖ ಪರ್ವತ ಹಾದಿಯಲ್ಲಿ 5-10 ನಿಮಿಷಗಳವರೆಗೆ ನಿಲ್ಲುತ್ತದೆ.
Instagram