Sahayathri

Sahayathri Contact information, map and directions, contact form, opening hours, services, ratings, photos, videos and announcements from Sahayathri, Travel Company, .

. Team  has today met Divisional Controller of  Mangaluru  requested to start limited stop bus service between Kasaragod...
24/03/2022

.
Team has today met Divisional Controller of Mangaluru requested to start limited stop bus service between Kasaragod- Mangalore & also provide common monthly pass to the passengers which will be valid for both Kerala & Karnataka state transport buses

ತಂಡದ ಸದಸ್ಯರು ಇಂದು ಮಂಗಳೂರಿನ ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಭೇಟಿ ಮಾಡಿ ಕಾಸರಗೋಡು-ಮಂಗಳೂರು ನಡುವೆ ಸೀಮಿತ ನಿಲುಗಡೆಯ ಬಸ್ ಸೇವೆಯನ್ನು ಪ್ರಾರಂಭಿಸಲು ಮತ್ತು ಕೇರಳ ಮತ್ತು ಕರ್ನಾಟಕ ರಾಜ್ಯ ಸಾರಿಗೆ ಬಸ್‌ ಗಳಲ್ಲೂ ಮಾನ್ಯವಾಗುವ ಮಾಸಿಕ ಪಾಸನ್ನು ಸಹ ಒದಗಿಸುವಂತೆ ವಿನಂತಿಸಿದೆ

15/01/2022

ವಿಶ್ವವಾಣಿ ಕ್ಲಬ್ ಹೌಸ್ ನಡೆಸಿ ಕೊಟ್ಟ ಕಾಸರಗೋಡು ಕನ್ನಡಿಗರ ಕಥೆ,ವ್ಯಥೆ ಎನ್ನುವ ಕಾರ್ಯಕ್ರಮದಲ್ಲಿ ನಮ್ಮ‌ ಸಹಯಾತ್ರಿ ತಂಡದ ದನಿಗೆ ಸ್ಪಂದಿಸಿದ ವಿಶ್ವವಾಣಿ ದಿನಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಅವರಿಗೆ ಧನ್ಯವಾದಗಳು.

ಅತ್ತ ಕರ್ನಾಟಕ್ಕೆ ಸಲ್ಲದಇತ್ತ ಕೇರಳಕ್ಕೂ ಬೇಡದಕನ್ನಡಿಗರ ನಾಡು ಅದುವೆ ಕಾಸರಗೋಡುಕನ್ನಡವನ್ನೇ ಉಸಿರಾಗಿಸಿರುವಕರ್ನಾಟಕವನ್ನೇ ಆಶ್ರಯಿಸಿರುವಗಡಿನಾಡ...
01/11/2021

ಅತ್ತ ಕರ್ನಾಟಕ್ಕೆ ಸಲ್ಲದ
ಇತ್ತ ಕೇರಳಕ್ಕೂ ಬೇಡದ
ಕನ್ನಡಿಗರ ನಾಡು ಅದುವೆ ಕಾಸರಗೋಡು

ಕನ್ನಡವನ್ನೇ ಉಸಿರಾಗಿಸಿರುವ
ಕರ್ನಾಟಕವನ್ನೇ ಆಶ್ರಯಿಸಿರುವ
ಗಡಿನಾಡಿಗರು ಆಗಿಹರು ಅನಾಥರು

ಕೋವಿಡ್ ಪ್ರತಿಬಂಧ
ಗಡಿಗಳಲ್ಲಿ ನಿರ್ಬಂಧ
ಎಂದು ಆದೀತು
ಬದುಕು ಸ್ವಚ್ಛಂದ?

#ಕನ್ನಡರಾಜ್ಯೋತ್ಸವ




https://twitter.com/sahayaathri/status/1455049292998082563?t=F0itksOQ3waCu6R6809bEg&s=19

“ಅತ್ತ ಕರ್ನಾಟಕ್ಕೆ ಸಲ್ಲದ ಇತ್ತ ಕೇರಳಕ್ಕೂ ಬೇಡದ ಕನ್ನಡಿಗರ ನಾಡು ಅದುವೆ ಕಾಸರಗೋಡು ಕನ್ನಡವನ್ನೇ ಉಸಿರಾಗಿಸಿರುವ ಕರ್ನಾಟಕವನ್ನೇ .....

*"ಕಾಸರಗೋಡಿನ‌ ಗಡಿನಾಡಿಗರಿಗೆ ಆರ್ ಟಿ ಪಿ ಸಿ ಆರ್ ಟೆಸ್ಟಿನಿಂದ ವಿನಾಯಿತಿ ನೀಡಿ" ಕಾಸರಗೋಡು ಜಿಲ್ಲೆಯ ದ ಕ ಅವಲಂಬಿತ ಗಡಿನಾಡಿಗರ ತಂಡ "ಸಹಯಾತ್ರ...
30/09/2021

*"ಕಾಸರಗೋಡಿನ‌ ಗಡಿನಾಡಿಗರಿಗೆ ಆರ್ ಟಿ ಪಿ ಸಿ ಆರ್ ಟೆಸ್ಟಿನಿಂದ ವಿನಾಯಿತಿ ನೀಡಿ" ಕಾಸರಗೋಡು ಜಿಲ್ಲೆಯ ದ ಕ ಅವಲಂಬಿತ ಗಡಿನಾಡಿಗರ ತಂಡ "ಸಹಯಾತ್ರಿ"ಯಿಂದ ದ.ಕ ಜಿಲ್ಲಾಧಿಕಾರಿಯವರಿಗೆ ಮನವಿ*

ಕಾಸರಗೋಡಿನ‌ ಗಡಿನಾಡಿಗರಿಗೆ ಆರ್ ಟಿ ಪಿ ಸಿ ಆರ್ ಟೆಸ್ಟಿನಿಂದ ವಿನಾಯಿತಿ ನೀಡಬೇಕೆಂಬ ಬೇಡಿಕೆಯನ್ನು ಕಾಸರಗೋಡು ಜಿಲ್ಲೆಯ ದಕ್ಷಿಣಕನ್ನಡ ಅವಲಂಬಿತ ಗಡಿನಾಡಿಗರ ತಂಡವಾದ "ಸಹಯಾತ್ರಿ" ಯು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಇಂದು ಮನವಿ ಮಾಡಿತು. ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರು ಕಾಸರಗೋಡು ಜಿಲ್ಲೆಯ ಕೊರೋನ ಟೆಸ್ಟ್‌ ಪೊಸಿಟಿವಿಟಿ ರೇಟಿನ ಆಧಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕಾಸರಗೋಡಿನ ಸಾವಿರಾರು ಮಂದಿ ಜನರು ಉದ್ಯೋಗ, ವಿದ್ಯಾಭ್ಯಾಸ, ವೈದ್ಯಕೀಯ ಹಾಗೂ ವ್ಯಾಪಾರ ವಹಿವಾಟುಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಅವಲಂಬಿಸಿದ್ದು . ಕರ್ನಾಟಕ ಸರಕಾರವು ಕಾಸರಗೋಡಿಗರಿಗೆ ದಕ್ಷಿಣ ಕನ್ನಡಕ್ಕೆ ಪ್ರವೇಶಿಸಲು ಆರ್ ಟಿ ಪಿ ಸಿ ಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿದ್ದು, ಕಳೆದ ಒಂದೂವರೆ ತಿಂಗಳಲ್ಲಿ ನೆಗೆಟಿವ್ ರಿಪೋರ್ಟ್ ಅನ್ನು ಹಾಜರಿಪಡಿಸಿದವರಿಗೆ ಮಾತ್ರ ಕರ್ನಾಟಕಕ್ಕೆ ಪ್ರವೇಶವನ್ನು ನೀಡುತ್ತಿದೆ. ದ.ಕ ಜಿಲ್ಲೆಗೆ ಉದ್ಯೋಗ ನಿಮಿತ್ತ ನಿತ್ಯ ಬರಬೇಕಾದ ಕಾಸರಗೋಡಿಗರು ತಿಂಗಳಲ್ಲಿ ನಾಲ್ಕು ಬಾರಿ ಕರೋನಾ ಟೆಸ್ಟ್ ಮಾಡಿಸಿಕೊಳ್ಳಬೇಕಾಗುತ್ತಿದೆ. ಇದೀಗ ಶಾಲಾ ಕಾಲೇಜುಗಳು ಆರಂಭವಾಗಿದ್ದು ದ.ಕ. ಜಿಲ್ಲೆಯ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಕಾಸರಗೋಡಿನ ವಿದ್ಯಾರ್ಥಿಗಳು ಕೂಡಾ ಪ್ರತೀ ವಾರ ಕರೋನಾ ಟೆಸ್ಟ್ ಗೆ ಒಳಪಡಬೇಕಾಗುತ್ತಿದೆ. ಅರ್ ಟಿ ಪಿ‌ ಸಿ ಆರ್ ಕಟ್ಟುಪಾಡುಗಳಿಂದ ಗಡಿನಾಡಿನ ಉದ್ಯೋಗ, ವಿದ್ಯಾರ್ಥಿ ಹಾಗೂ ವ್ಯಾಪಾರ ಮಾತ್ರವಲ್ಲದೆ ತುರ್ತು ವೈದ್ಯಕೀಯ ಸೇವೆಗಳಿಗೆ ತೆರಳುವವರಿಗೆ ಗಡಿ ಸಂಚಾರ ಮುಕ್ತಗೊಳಿಸಬೇಕು ಎಂಬ ಬೇಡಿಕೆಗಳನ್ನು ಸಹಯಾತ್ರಿ ತಂಡ ಜಿಲ್ಲಾಧಿಕಾರಿಗಳಿಗೆ ನೀಡಿದೆ.
ಸಹಯಾತ್ರಿ ತಂಡದ ಲೋಕೇಶ್ ಜೋಡುಕಲ್ಲು, ಕೃಷ್ಣ ಕಿಶೋರ್ ಏನಂಕೂಡ್ಲು, ಶಿವಕೃಷ್ಣ ನಿಡುವಜೆ ಹಾಗೂ ಗಣೇಶ್ ಭಟ್ ವಾರಣಾಸಿ ಸಹಯಾತ್ರಿಯ ಪರವಾಗಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದರು

ಈಗಾಗಲೇ ಕೇರಳ  ಬಸ್ ಗಳು ಕಾಸರಗೋಡಿನಿಂದ ತಲಪಾಡಿಯವರೆಗೆ ಓಡಾಟ ಮಾಡುತ್ತಿವೆ.ಮಂಗಳೂರಿನಲ್ಲಿ ಶಾಲಾ ಕಾಲೇಜುಗಳು ಆರಂಭಗೊಂಡಿದ್ದು,ಗಡಿನಾಡಿನ ವಿದ್ಯಾ...
20/09/2021

ಈಗಾಗಲೇ ಕೇರಳ ಬಸ್ ಗಳು ಕಾಸರಗೋಡಿನಿಂದ ತಲಪಾಡಿಯವರೆಗೆ ಓಡಾಟ ಮಾಡುತ್ತಿವೆ.ಮಂಗಳೂರಿನಲ್ಲಿ ಶಾಲಾ ಕಾಲೇಜುಗಳು ಆರಂಭಗೊಂಡಿದ್ದು,ಗಡಿನಾಡಿನ ವಿದ್ಯಾರ್ಥಿಗಳ ಪ್ರಯಾಣದ ಅನುಕೂಲಕ್ಕಾಗಿ ಕರ್ನಾಟಕ ಬಸ್ಸುಗಳು ಮಂಗಳೂರಿನಿಂದ ತಲಪಾಡಿಯವರೆಗೆ ಸೇವೆಯನ್ನು ಆರಂಭಿಸಬೆಕಾಗಿ ವಿನಂತಿ

https://twitter.com/sahayaathri/status/1439847822816268289?s=19

“ಈಗಾಗಲೇ ಕೇರಳ ಬಸ್ ಗಳು ಕಾಸರಗೋಡಿನಿಂದ ತಲಪಾಡಿಯವರೆಗೆ ಓಡಾಟ ಮಾಡುತ್ತಿವೆ.ಮಂಗಳೂರಿನಲ್ಲಿ ಶಾಲಾ ಕಾಲೇಜುಗಳು ಆರಂಭಗೊಂಡಿದ್ದ....

Sri  who is contesting for Kasargod assembly has played a major role in facilitating the free movement of Gadinadu peopl...
16/03/2021

Sri who is contesting for Kasargod assembly has played a major role in facilitating the free movement of Gadinadu people by fighting in the streets and fighting in the HC
We SAHAYATHRI, people of Kasargod who depending in D K district support & wish him good luck https://t.co/7hdVU9sxH

Adv K Shreekanth

“Sri who is contesting for Kasargod assembly has played a major role in facilitating the free movement of Gadinadu people by fighting in the streets and fighting in the HC We SAHAYATHRI, people of Kasargod who depending in D K district support & wish him good luck”

"ಕರ್ನಾಟಕ ಗಡಿ ನಿಯಂತ್ರಣದಿಂದ ಮಂಜೇಶ್ವರ-ಕಾಸರಗೋಡು ತಾಲೂಕಿನವರಿಗೆ ವಿನಾಯಿತಿ ನೀಡಿ"ಸಹಯಾತ್ರಿ - ದಕ್ಷಿಣ ಕನ್ನಡ ಅವಲಂಬಿತ ಗಡಿನಾಡ ಸಹಪ್ರಯಾಣಿಕ...
24/02/2021

"ಕರ್ನಾಟಕ ಗಡಿ ನಿಯಂತ್ರಣದಿಂದ ಮಂಜೇಶ್ವರ-ಕಾಸರಗೋಡು ತಾಲೂಕಿನವರಿಗೆ ವಿನಾಯಿತಿ ನೀಡಿ"
ಸಹಯಾತ್ರಿ - ದಕ್ಷಿಣ ಕನ್ನಡ ಅವಲಂಬಿತ ಗಡಿನಾಡ ಸಹಪ್ರಯಾಣಿಕರ ವೇದಿಕೆಯಿಂದ ಕರ್ನಾಟಕಕ್ಕೆ ಒತ್ತಾಯ
https://t.co/Ge4IDlV5GSಕರ್ನಾಟಕ-ಗಡಿ-ನಿಯಂತ್ರಣದಿಂದ/

  an organization of Kasaragod people in Banglore submitted a memorandum to sri  & requested him to relax   border restr...
22/02/2021

an organization of Kasaragod people in Banglore submitted a memorandum to sri & requested him to relax border restriction for people of Manjeshwara-Kasaragod Taluks as they more depend on Dakshina Kannada 4 Education Job & Healthcare
https://t.co/oW0yJgra87

“ an organization of Kasaragod people in Banglore submitted a memorandum to sri & requested him to relax border restriction for people of Manjeshwara-Kasaragod Taluks as they more depend on Dakshina Kannada 4 Education Job & Healthcare ”

ಬೆಂಗಳೂರಿನಲ್ಲಿರುವ ಕಾಸರಗೋಡು ನಿವಾಸಿಗಳ ಸಂಘಟನೆ *ವಿಕಾಸ ಟ್ರಸ್ಟ್* ನ ಪದಾಧಿಕಾರಿಗಳು ಇಂದು ಕರ್ನಾಟಕದ ಮುಖ್ಯಮಂತ್ರಿಗಳಾದ ಸನ್ಮಾನ್ಯ *ಶ್ರೀ ಬಿ...
22/02/2021

ಬೆಂಗಳೂರಿನಲ್ಲಿರುವ ಕಾಸರಗೋಡು ನಿವಾಸಿಗಳ ಸಂಘಟನೆ *ವಿಕಾಸ ಟ್ರಸ್ಟ್* ನ ಪದಾಧಿಕಾರಿಗಳು ಇಂದು ಕರ್ನಾಟಕದ ಮುಖ್ಯಮಂತ್ರಿಗಳಾದ ಸನ್ಮಾನ್ಯ *ಶ್ರೀ ಬಿ.ಎಸ್. ಯಡಿಯೂರಪ್ಪ* ಅವರನ್ನು ವಿಧಾನ ಸೌಧದಲ್ಲಿ ಭೇಟಿ ಮಾಡಿ *ಮಂಜೇಶ್ವರ ಮತ್ತು ಕಾಸರಗೋಡು ತಾಲೂಕುಗಳ ಜನರಿಗೆ ಕರ್ನಾಟಕಕ್ಕೆ ಪ್ರವೇಶಿಸಲು ಇರುವ ಕೋವಿಡ್-19 ಪರೀಕ್ಷೆ ವರದಿ ಕಡ್ಡಾಯದಿಂದ ವಿನಾಯಿತಿ ನೀಡುವ ಬಗ್ಗೆ* ಮನವಿ ಸಲ್ಲಿಸಿದರು.

ಈ ಕುರಿತ ಮನವಿ ಪತ್ರವನ್ನು ತನ್ನ ಕಾರ್ಯದರ್ಶಿಗಳಿಗೆ ನೀಡಿದ ಮುಖ್ಯಮಂತ್ರಿಗಳು ಈ ವಿಷಯದ ಬಗ್ಗೆ ಸಹಾನುಭೂತಿಯಿಂದ ಪರಿಶೀಲಿಸುವ ಭರವಸೆ ನೀಡಿದರು.

ನಂತರ ನಿಯೋಗವು ಮುಖ್ಯಮಂತ್ರಿಗಳ ಕಾರ್ಯದರ್ಶಿಯವರನ್ನು ಭೇಟಿಯಾಗಿ ಮಂಜೇಶ್ವರ ಮತ್ತು ಕಾಸರಗೋಡು ತಾಲೂಕಿನ ಜನರಿಗಾಗುವ ತೊಂದರೆಯನ್ನು ವಿವರಿಸಿ ಈ ಕೆಳಗಿನ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

1. ಮಂಜೇಶ್ವರ ಮತ್ತು ಕಾಸರಗೋಡು ತಾಲೂಕುಗಳ ಜನರು ಹೆಚ್ಚಾಗಿ ದಕ್ಷಿಣ ಕನ್ನಡವನ್ನು ಆಶ್ರಯಿಸಿರುವುದರಿಂದ ಮತ್ತು ಈ ಪ್ರದೇಶದಲ್ಲಿ ಕೋವಿಡ್ ಕನಿಷ್ಠ ಪ್ರಮಾಣದಲ್ಲಿರುವುದರಿಂದ ಈ ತಾಲೂಕುಗಳ ಜನರಿಗೆ ಕೋವಿಡ್-19 ಪರೀಕ್ಷೆಯಿಂದ ವಿನಾಯಿತಿ ನೀಡಬೇಕು. ಈ ಜನರ ವಾಸಸ್ಥಳ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ವಿಳಾಸವನ್ನು ಪರಿಗಣಿಸಿ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಮತ್ತು ಮೊಬೈಲ್ ನಂಬರ್ ಪಡೆದುಕೊಂಡು ದಕ್ಷಿಣ ಕನ್ನಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡಬೇಕು.
2. ಈಗಾಗಲೇ ಸಂಚಾರಕ್ಕೆ ಅನುಮತಿಸಿದ 4 ರಸ್ತೆಗಳಲ್ಲದೆ, ಮಂಜೇಶ್ವರ - ಪುತ್ತೂರು ರಸ್ತೆಯ ಆನೆಕಲ್ಲು, ಬಂದಡ್ಕ-ಸುಳ್ಯ ರಸ್ತೆಯ ಮಾಣಿಮೂಲೆ, ಉಪ್ಪಳ-ಪುತ್ತೂರು ರಸ್ತೆಯ ನೆಲ್ಲಿಕಟ್ಟೆ-ಮುಗುಳಿ ಹಾಗೂ ಪೆರ್ಲ-ಪಾಣಾಜೆ ರಸ್ತೆಯ ಸ್ವರ್ಗ ಚೆಕ್ ಪೋಸ್ಟ್ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡಬೇಕು.
3. ಇತರೆ ಮುಂಜಾಗ್ರತಾ ಕ್ರಮಗಳಾದ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಇವುಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸುವ ಕ್ರಮಗಳಿಗೆ ನಮ್ಮ ಸಂಪೂರ್ಣ ಸಹಮತವಿದೆ.

ನಿಯೋಗದಲ್ಲಿ ವಿಕಾಸ ಟ್ರಸ್ಟ್ ನ ಅಧ್ಯಕ್ಷರಾದ ರವಿನಾರಾಯಣ ಗುಣಾಜೆ, ಕಾರ್ಯದರ್ಶಿ ನಿತಿನರಾಜ್ ನಾಯ್ಕ್, ಬಾ.ನಾ.ಸುಬ್ರಹ್ಮಣ್ಯ, ಗಿರೀಶ್, ಮಂಜು ಪ್ರಸಾದ್ ಮುಂತಾದವರಿದ್ದರು.

ಟ್ರಸ್ಟಿನ ಪದಾಧಿಕಾರಿಗಳು ಇದೇ ವಿಷಯವಾಗಿ ನಾಳೆ ಕರ್ನಾಟಕದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರನ್ನು ಭೇಟಿಯಾಗಲಿದ್ದಾರೆ.

*ಕೆ ಎಸ್ ಆರ್ ಟಿ ಸಿ ಬಸ್ ಟಿಕೇಟ್ ದರದಲ್ಲಿ ಭಾರೀ ಹೆಚ್ಚಳ- ಕರೋನಾ ಕಷ್ಟದ ಕಾಲದಲ್ಲಿ ಕೇರಳ ಸರಕಾರದ ಹಗಲು ದರೋಡೆ*ಈ ಕರೋನಾ ಕಾಲದಲ್ಲಿ‌ ಜನಸಾಮಾನ್...
19/11/2020

*ಕೆ ಎಸ್ ಆರ್ ಟಿ ಸಿ ಬಸ್ ಟಿಕೇಟ್ ದರದಲ್ಲಿ ಭಾರೀ ಹೆಚ್ಚಳ- ಕರೋನಾ ಕಷ್ಟದ ಕಾಲದಲ್ಲಿ ಕೇರಳ ಸರಕಾರದ ಹಗಲು ದರೋಡೆ*

ಈ ಕರೋನಾ ಕಾಲದಲ್ಲಿ‌ ಜನಸಾಮಾನ್ಯರು ಬಹಳ ಸಂಕಷ್ಟಗಳಿಗೆ ಸಿಲುಕಿದ್ದಾರೆ. ಆರ್ಥಿಕ ನಷ್ಟ, ಉದ್ಯೋಗ ನಷ್ಟ ಮೊದಲಾದ ಸಮಸ್ಯೆಗಳಿಂದಾಗಿ ಜನರು ಬಳಲುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾಸರಗೋಡು ಮಂಗಳೂರು ನಡುವೆ ಓಡಾಡುವ ಕೆ ಎಸ್ ಆರ್ ಟಿ ಸಿ ಬಸ್ ಗಳ ಟಿಕೇಟು ದರವನ್ನು ಕೇರಳ ಸರಕಾರವು ಬರೋಬ್ಬರಿ 11 ರುಪಾಯಿಗಳಷ್ಟು ಏರಿಸಿರುವುದು ಜನರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಮೊದಲು ಕಾಸರಗೋಡು ಮಂಗಳೂರು ನಡುವಿನ ಪ್ರಯಾಣದ ಟಿಕೆಟ್ ದರ 57 ರುಪಾಯಿಗಳಿದ್ದು ಅದನ್ನು ಈಗ ಏಕಾಯೇಕಿ ರುಪಾಯಿ 68ಕ್ಕೆ ಏರಿಸಲಾಗಿದೆ. ಈ ಮೂಲಕ‌ ಟಿಕೆಟ್ ದರವನ್ನು ಸರಿಸುಮಾರು 20% ರಷ್ಟು ಏರಿಸಿದಂತಾಗಿದೆ. ಟಿಕೆಟ್ ದರವನ್ನು ಏರಿಸಿರುವುದರ ವಿರುದ್ಧವಾಗಿ ಕೇರಳ ಹಾಗೂ ಕರ್ನಾಟಕ ಗಳ ಸಾರಿಗೆ ಸಂಸ್ಥೆಗಳಿಗೆ ಸಹಯಾತ್ರಿ ಸಂಘಟನೆಯು ಟ್ವೀಟರ್ ಮೂಲಕ ಆಕ್ಷೇಪವನ್ನು ಸಲ್ಲಿಸಿದಾಗ ಕರ್ನಾಟಕ ಕೆ ಎಸ್ ಆರ್ ಟಿ ಸಿ ಯು ಉತ್ತರಿಸಿ, ಬೆಲೆಯನ್ನು ಏರಿಸಿರುವುದು ಕೇರಳ ಕೆ ಎಸ್ ಆರ್ ಟಿ ಸಿ ಯಾಗಿದೆ, ಹೀಗಾಗಿ ಕೇರಳ ಕೆ ಎಸ್ ಆರ್ ಟಿ ಸಿಯ ಜೊತೆಗಿನ ಒಪ್ಪಂದದ ಅನ್ವಯ ಕರ್ನಾಟಕ ಸಾರಿಗೆಯೂ ಬಸ್ ಟಿಕೇಟ್ ದರವನ್ನು ಹೆಚ್ಚು ಮಾಡಿದೆ ಎಂದು ಹೇಳಿದೆ.

ಟಿಕೇಟ್ ದರ ಹೆಚ್ಚು ಮಾಡಿರುವುದು‌ ಕೇರಳ ಸರಕಾರ ಎಂಬುದು ಇದರಿಂದ ಸ್ಪಷ್ಟವಾಗಿದೆ. ಕೇರಳ ಸರಕಾರವು ಬಸ್ ಟಿಕೇಟ್ ಬೆಲೆ ಏರಿಸಿರುವುದರಿಂದ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಆಧಾರವಾಗಿದ್ದ ರೈಲು ಸೇವೆಯೂ ಆರಂಭವಾಗಿಲ್ಲ. ಕರೋನಾ ಕಷ್ಟದ ಕಾಲದಲ್ಲಿ ಸರಕಾರೀ ಬಸ್ ಟಿಕೇಟಿನ‌ ದರ ಹೆಚ್ಚಿಸುವ ಕೇರಳ ಸರಕಾರದ ನಡೆಯನ್ನು ಸಹಯಾತ್ರಿ ಸಂಘಟನೆಯು ಖಂಡಿಸಿ ಬೆಲೆಯೇರಿಕೆಯನ್ನು ಶೀಘ್ರವೇ ಹಿಂದೆಗೆಯಬೇಕೆಂದು ಆಗ್ರಹಿಸುತ್ತಿದೆ

*ಟೀಂ ಸಹಯಾತ್ರಿ*

18/09/2020

ಅಂತಾರಾಜ್ಯ ಗಡಿಗಳನ್ನು ತೆರವುಗೊಳಿಸಲು ಸನ್ಮಾನ್ಯ ಹೈಕೋರ್ಟ್ ಆದೇಶ ಅಂತರ್ರಾಜ್ಯ ಪ್ರಯಾಣಕ್ಕೆ ನಿರ್ಬಂಧ ಇಲ್ಲ ಕೇರಳ ಹೈಕೋರ್ಟ್ ಆದೇಶ.
ಈ ಒಂದು ಹೋರಾಟಕ್ಕೆ ಹಗಲು-ರಾತ್ರಿ ಎಂದು ಇಲ್ಲದೆ ಹೋರಾಡಿದ ಸಹಯಾತ್ರಿ ಟೀಮಿನ ಎಲ್ಲರಿಗೂ ಅಭಿನಂದನೆಗಳು 💐🤝🙏
ಬೆಂಬಲಿಸಿದ ಎಲ್ಲಾ ಜನರಿಗೂ ಅನಂತಾನಂತ ಧನ್ಯವಾದಗಳು.🙏

ಎಲ್ಲಾ ಸಹಯಾತ್ರಿಗಳ ಗಮನಕ್ಕೆಸ್ವರ್ಗ-ಪಾಣಾಜೆ ಬ್ಯಾರಿಕೇಡ್ ಇನ್ನೂ ತೆಗೆದಿಲ್ಲ. ಈ ಬಗ್ಗೆ ನಾಳೆ (ಸೆಪ್ಟೆಂಬರ್05, ಶನಿವಾರ) ಬೆಳಿಗ್ಗೆ ‌10 ಗಂಟೆಗ...
04/09/2020

ಎಲ್ಲಾ ಸಹಯಾತ್ರಿಗಳ ಗಮನಕ್ಕೆ

ಸ್ವರ್ಗ-ಪಾಣಾಜೆ ಬ್ಯಾರಿಕೇಡ್ ಇನ್ನೂ ತೆಗೆದಿಲ್ಲ. ಈ ಬಗ್ಗೆ ನಾಳೆ
(ಸೆಪ್ಟೆಂಬರ್05, ಶನಿವಾರ) ಬೆಳಿಗ್ಗೆ ‌10 ಗಂಟೆಗೆ ಸ್ವರ್ಗ ಜಂಕ್ಷನ್ ನಲ್ಲಿ ಹಾಕಲಾಗಿರುವ ಬ್ಯಾರಿಕೇಡ್ ತೆಗೆದು ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಲು ಘೇರಾವ್ ಮತ್ತು ಪ್ರತಿಭಟನೆ ನಡೆಯಲಿದೆ.

ಈ ಹೋರಾಟಕ್ಕೆ ನಮ್ಮ ಸಹಯಾತ್ರಿ ತಂಡದ ಹಾಗೂ ದಕ್ಷಿಣ ಕನ್ನಡ ಅವಲಂಬಿತ ಗಡಿನಾಡ ಹೋರಾಟ ಸಮಿತಿ ಸಂಪೂರ್ಣ ಬೆಂಬಲ ನೀಡುತ್ತದೆ.

ಆದುದರಿಂದ ಆ ಭಾಗದಲ್ಲಿ ಇರುವ ಸಹಯಾತ್ರಿ ತಂಡದ ಸದಸ್ಯರು
ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅಗತ್ಯವಾಗಿ ಸೇರಿಕೊಳ್ಳಲು ವಿನಂತಿಸುತ್ತಿದ್ದೇವೆ.

We support tomorrow's protest to make between Swarga-Panaje

We will not rest until all roads from Kasaragod dist to Dakshina Kannada will be opened without restriction

Team SAHAYATHRI

https://twitter.com/sahayaathri/status/1301916966467366914?s=19

“We support tomorrow's protest to make between Swarga-Panaje We will not rest until all roads from Kasaragod dist to Dakshina Kannada will be opened without restriction https://t.co/HqILeHz...

ದಕ್ಷಿಣ ಕನ್ನಡ ಅವಲಂಬಿತ ಗಡಿನಾಡಿಗರ ಹೋರಾಟ ಸಮಿತಿ ಯ ಪತ್ರಿಕಾ ಗೋಷ್ಠಿಯ ಮಾಧ್ಯಮ ವರದಿಗಳುhttps://hosadigantha.com/ಕೇರಳ-ಕರ್ನಾಟಕ-ಅಂತಾರಾಜ...
04/09/2020

ದಕ್ಷಿಣ ಕನ್ನಡ ಅವಲಂಬಿತ ಗಡಿನಾಡಿಗರ ಹೋರಾಟ ಸಮಿತಿ ಯ ಪತ್ರಿಕಾ ಗೋಷ್ಠಿಯ ಮಾಧ್ಯಮ ವರದಿಗಳು

https://hosadigantha.com/ಕೇರಳ-ಕರ್ನಾಟಕ-ಅಂತಾರಾಜ್ಯ-ಸ-2/

http://samarasasudhi.blogspot.com/2020/09/blog-post_93.html

https://news13.in/archives/163952

https://hosadigantha.com/ಕೇರಳ-ಕರ್ನಾಟಕ-ಅಂತಾರಾಜ್ಯ-ಸ-2/

02/09/2020

ಈ ದಿನದ ಪತ್ರಿಕಾಗೋಷ್ಠಿಯ
*ಉಪಸ್ಥಿತಿ*
ಶ್ರೀ ವಿಪಿನ್ ದಾಸ್ ನಂಬಿಯಾರ್ - ಸಂಚಾಲಕರು
ಶ್ರೀ ಗಣೇಶ್ ಭಟ್ ವಾರಣಾಸಿ - ಸದಸ್ಯರು
ಶ್ರೀ ಬಾಸ್ಕರ ಕಾಸರಗೋಡು -
ಸದಸ್ಯರು
ಶ್ರೀ ಹರಿಪ್ರಸಾದ್ ಕಾನ - ಸದಸ್ಯರು

02/09/2020

ഈ ദിവസത്തെ പത്രസമ്മേളനത്തിൽ
* സാന്നിദ്ധ്യം *
ശ്രീ വിപിൻ ദാസ് നമ്പ്യാർ - കൺവീനർ
ശ്രീ ഗണേഷ് ഭട്ട് വാരണാസി - അംഗങ്ങൾ
ശ്രീ ബാസ്കർ കാസറഗോട് -
അംഗങ്ങൾ
ശ്രീ ഹരിപ്രസാദ് കാന - അംഗങ്ങൾ

No   allowed between D K dist & Kasaragod dist by Kasaragod dist administration even after  This is time  to fight for r...
01/09/2020

No allowed between D K dist & Kasaragod dist by Kasaragod dist administration even after

This is time to fight for right

If you support whatsapp your name to 7034079499

Or join us at

https://t.co/wwuoLA2TLK

Central govt  issued   .But   is restricted by Kasaragod DC  Now what choice  people of Kasaragod have left ?Please vote...
30/08/2020

Central govt issued .

But is restricted by Kasaragod DC

Now what choice people of Kasaragod have left ?

Please vote, comment & retweet

https://twitter.com/sahayaathri/status/1300147655671271424?s=19

“Central govt issued . But is restricted by Kasaragod DC Now what choice people of Kasaragod have left ? Please vote, comment & retweet”

26/08/2020
26/08/2020

Though there is clear instruction from for the between inter state,still & Kasaragod dist administration not allow people to enter Kerala

ಅಂತರರಾಜ್ಯ ಮುಕ್ತ ಸಂಚಾರಕ್ಕೆ ಕೇಂದ್ರದ ಆದೇಶ ಇದ್ದರೂ ಕೇರಳ ಸರಕಾರ ಜಾರಿ ಮಾಡದೆ, ತಲಪಾಡಿಯಲ್ಲಿ ಕೇರಳ ಪ್ರವೇಶ ಮಾಡುವವರನ್ನು ತಡೆಯುತ್ತಿದೆ.

PMO India Chief Minister's Office, Kerala
District Collector Kasaragod
Amit Shah Press Information Bureau - PIB, Government of India

25/08/2020

ಸಹಯಾತ್ರಿ ತಂಡವು ಒಂದು ರಾಜಕೀಯೇತರ ಸಂಘಟನೆಯಾಗಿದೆ. ಆದರೆ ಒಂದು ಸತ್ಯವನ್ನು ಇಲ್ಲಿ ಪ್ರಸ್ತಾಪಿಸದೆ ಇದ್ದರೆ ಅದು ಅನ್ಯಾಯವಾಗುತ್ತದೆ.ಗಡಿನಾಡಿಗರ ಕರ್ನಾಟಕ ಸಂಚಾರದ ವಿಚಾರದಲ್ಲಿ, ಗಡಿನಾಡಿಗರ ಹಿತದೃಷ್ಟಿಯಿಂದ ಹೋರಾಟ ಮಾಡಿದ ಏಕೈಕ ರಾಜಕೀಯ ಪಕ್ಷ ಬಿಜೆಪಿ ಮಾತ್ರ. ಕರ್ನಾಟಕ್ಕೆ ಹೋಗಲು ಪಾಸ್ ಕೊಡದ ಕರ್ನಾಟಕದ ಬಿಜೆಪಿ ಸರಕಾರದ ವಿರುದ್ಧವೇ ಜೂನ್ ತಿಂಗಳಲ್ಲಿ ಪ್ರತಿಭಟನೆ ಮಾಡಿ ನಿತ್ಯ ಪಾಸ್ ಸಿಗುವಂತೆ ಮಾಡಿದ್ದು ಕಾಸರಗೋಡು ಬಿಜೆಪಿ, ಕೇರಳ ಸರಕಾರವು ಜುಲೈ 6 ರ ನಂತರ ಜಿಲ್ಲೆಯ ಗಡಿಗಳನ್ನು ಮುಚ್ಚಿದಾಗ ಅದರ ವಿರುದ್ಧ ಕೇರಳ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಯನ್ನು ಸಲ್ಲಿಸಿ ಕಾನೂನು ಹೋರಾಟ ಮಾಡಿದ್ದೂ ಕಾಸರಗೋಡು ಬಿಜೆಪಿಯೇ. ಇಂದು ಕಾನೂನು ಉಲ್ಲಂಘನೆಯ ಹೋರಾಟವನ್ನು ಶುರು ಮಾಡಿ ಎಲ್ಲಾ ಬ್ಯಾರಿಕೇಡ್ ಗಳನ್ನು ತೆರೆದು ಜನರ ಮುಕ್ತ ಸಂಚಾರಕ್ಕೆ ಅನುವು ಮಾಡಿದ್ದೂ ಕಾಸರಗೋಡು ಬಿಜೆಪಿಯೇ. ಸಹಯಾತ್ರಿಯ ಸದಸ್ಯರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಕಾಸರಗೋಡು ಭಾಜಪಾ ಪಕ್ಷ ಹಾಗೂ ಕಾಸರಗೋಡು ಭಾಜಪದ ಅಧ್ಯಕ್ಷ ರಾದ ಅಡ್ವಕೇಟ್ ಶ್ರೀಕಾಂತ್ ಅವರಿಗೆ ಸಹಯಾತ್ರಿ ತಂಡದ ಪರವಾಗಿ ಧನ್ಯವಾದಗಳು.

Team Sahayathri

Adv. K. Shreekanth BJP

BJP Kasaragod

BJP Kasaragod & BJP Manjeshwaram

BJP Keralam

Address


Website

Alerts

Be the first to know and let us send you an email when Sahayathri posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Travel Agency?

Share