22/09/2021
ವರಾಹನಾಥ ಕಲ್ಲಹಳ್ಳಿಯ ನೀವು ನೋಡಿದ್ದೀರಾ ????? ಹೇಮಾವತಿ ನದಿಯ ತಟದಲ್ಲಿ ಭೂದೇವಿಯ ಜೊತೆ ಕುಳಿತ ವರಾಹಾವತಾರಿ !!!!!
ಭೂ ವರಾಹ ನಾಥ ಸ್ವಾಮೀ ಮೂಲ ವಿಗ್ರಹ.
ವರಾಹ ನಾಥ ಕಲ್ಲಹಳ್ಳಿ ಮಂಡ್ಯ ಜಿಲ್ಲೆಯ ಕೆ .ಆರ್. ಪೇಟೆ ತಾಲೂಕಿನ ಒಂದು ಪುಣ್ಯ ಕ್ಷೇತ್ರ !ಕೆ.ಆರ್. ಪೇಟೆ ಯಿಂದ ೧೮.ಕಿ.ಮಿ.,ಮೈಸೂರಿನಿಂದ ೪೩ ಕಿ.ಮಿ. ದೂರದಲ್ಲಿದೆ.ಪಶ್ಚಿಮ ದಿಂದ ಉತ್ತರಕ್ಕೆ ಸಾಗುವ ಹೇಮಾವತಿ ನದಿಯ ದಡದಲ್ಲಿ ದೇವಾಲಯ ನಿರ್ಮಾಣವಾಗಿದೆ!ದೇವಾಲಯ ಪೂರ್ವಕ್ಕೆ ಮುಖ ಮಾಡಿದ್ದು ,ಗರ್ಭ ಗಡಿಯಲ್ಲಿ ಎತ್ತರದ ಪೀಠದ ಮೇಲೆ ವರಾಹ ಸ್ವಾಮಿ ಹಾಗು ಎಡ ತೊಡೆಯ ಮೇಲೆ ಭೂದೇವಿಯು ಆಸಿನಳಾಗಿದ್ದು, ಅವಳ ಸೊಂಟವನ್ನು ವರಾಹಸ್ವಾಮಿಯು ಬಳಸಿ ವಿಶಿಷ್ಟ ಬಂಗಿಯಲ್ಲಿ ದರ್ಶನ ನೀಡುತ್ತಾನೆ!ಮೂರ್ತಿಯು ಭವ್ಯ ವಾಗಿದ್ದು ೧೫ ಅಡಿ ಎತ್ತರವಿದೆ!ಹೊರಗಿನಿಂದ ದೇವಾಲಯ ನೋಡಿದವರಿಗೆ ಇಷ್ಟು ದೊಡ್ಡ ದೇವರ ಮೂರ್ತಿ ಒಳಗಡೆ ಇದೆ ಎಂದರೆ ನಂಬಲಾರರು!ಇದನ್ನು ಭೂವರಾಹನಾಥ ಸನ್ನಿದಿ ಎಂದು ನಂಬಿರುವ ಜನರು ಭೂಮಿಗೆ ಸಂಬಂದಿಸಿದ ಕಷ್ಟಗಳು ಪರಿಹಾರ ವಾಗುತ್ತವೆ ಎಂದು ಹೇಳುತ್ತಾರೆ!ದೇವಾಲಯದ ಮುಂಭಾಗದಲ್ಲಿ ಒಂದು ಶಿಲಾಶಾಸನದ ಕಲ್ಲಿದ್ದು ದೇವಾಲಯದ ಮಾಹಿತಿ ನೀಡುತ್ತಿದೆ.೧೩೩೪ರ ಈ ಶಾಸನದ ರೀತ್ಯಾ ಮಹಾಪ್ರಧಾನ ಆದಿ ಸಿಂಗೇಯ ನಾಯಕನು ಕಲ್ಲಹಳ್ಳಿ ಗ್ರಾಮವನ್ನು ಅಗ್ರಹಾರವಾಗಿಸಿ ,ರಾಣಿ ದೇಮಲದೇವಿಯ ಹೆಸರಿನಲ್ಲಿ ದೇವಲಾಪುರ ಎಂದು ನಾಮಕರಣ ಮಾಡಿ ,ರಾಜ ಗುರು ಗುಮ್ಮಟ ದೇವನಿಗೆ ದಾನ ಮಾಡಿರುವುದಾಗಿ ತಿಳಿಸುತ್ತದೆ.ಶಾಸನದಲ್ಲಿ ಸೂರ್ಯ-ಚಂದ್ರ ,ಕಮಂಡಲ ,ದೀಪ ಮಾಲೆ ಕಂಬ ಅರ್ದ ಮಾನವ ಹಾಗು ಅರ್ದ ಬೇರುಂಡ ಪಕ್ಷಿ ಕೆತ್ತನೆಯಿದ್ದು ,ಪಂಜ ಮೇಲೆತ್ತಿ ಗರ್ಜಿಸಿರುವ ಹುಲಿಯ ಕೆತ್ತನೆ ಅದ್ಭುತವಾಗಿದೆ.ಬಂದವರು ಜೊತೆಯಲ್ಲಿ ಊಟ ತಿಂಡಿ ಯನ್ನು ತರುವುದು ಒಳ್ಳೆಯದು ! ಇಲ್ಲಿ ತಿನ್ನಲು ಯಾವ ಸೌಲಬ್ಯ ಇರುವುದಿಲ್ಲ .ಮೈಸೂರಿನಿಂದ ಒಂದು ಸರ್ಕಾರಿ ಬಸ್ಸು ಬೆಳಿಗ್ಗೆ ೭ ಗಂಟೆಗೆ ಹೊರಡುತ್ತದೆ .ಸ್ವಂತ ವಾಹನ ಇದ್ದಲ್ಲಿ ಇನ್ನು ಸುತ್ತ ಮುತ್ತ ಕೆಲವು ಪ್ರದೇಶ ನೋಡಬಹುದು!ಒಮ್ಮೆ ಪ್ರಯತ್ನಿಸಿ ಸಂತೋಷ ಹೊಂದಿರಿ.
ಹಾಗೆ ಪಕ್ಷಿ ವೀಕ್ಷಕರಿಗೆ ಸಿಹಿ ಸುದ್ದಿ ಇಲ್ಲೇ ಪಕ್ಕದಲ್ಲೇ ಹರಿಯುವ ಹೇಮಾವತಿ ನದಿಯ ದಂಡೆಯಲ್ಲಿ ನಿಮಗೆ ಹಲವಾರು ಬಗೆಯ ನೀರು ಹಕ್ಕಿಗಳು, ಪಕ್ಕದ ಹಸಿರಿನ ಗದ್ದೆಗಳಲ್ಲಿ ಬಗೆ ಬಗೆಯ ಹಲವಾರು ಜಾತಿಯ ಹಕ್ಕಿಗಳನ್ನು ಕಾಣಬಹುದು . ಇಲ್ಲಿಗೆ ತಲುಪಲು ಬೆಂಗಳೂರಿನಿಂದ ಮಂಡ್ಯ , ಶ್ರೀ ರಂಗಪಟ್ಟಣದ ಸಮೀಪ ಕಿರಂಗೂರ್ ಗೇಟ್ ಬಳಿ ಬಲಕ್ಕೆ ತಿರುಗಿ ಕೆ.ಆರ್.ಪೇಟೆ ರಸ್ತೆಯಲ್ಲಿ ಸಾಗಿ ಪಾಂಡವಪುರ ರೈಲ್ವೆ ನಿಲ್ದಾಣ, ಚಿನಕುರುಳಿ, ಭೂಕನಕೆರೆ , ಅಲ್ಲಿಂದ ಗಂಜಿಗೆರೆ , ಅಲ್ಲಿಂದ ನಾಲ್ಕು ಕಿ.ಮಿ.ಕ್ರಮಿಸಿದರೆ ನಿಮಗೆ ವರಾಹನಾಥ ಕಲ್ಲಹಳ್ಳಿ ಸಿಗುತ್ತದೆ. ಇದು ಹತ್ತಿರದ ದಾರಿಯೂ ಸಹ ಹೌದು. ಭೂ ವಿವಾಧಗಳಿಗೆ ಸಂಭಂದಿಸಿದಂತೆ ಇಲ್ಲಿ ಪರಿಹಾರ ಪಡೆಯಲು ಬಹಳಷ್ಟು ಜನ ಇಲ್ಲಿಗೆ ಬರುತ್ತಾರೆ. ಅದಕ್ಕಾಗೆ ಈ ದೇವರನ್ನು ಭೂ ವರಾಹನಾಥ ಸ್ವಾಮೀ ಎಂದು ಕರೆಯುವುದಾಗಿ ತಿಳಿದು ಬರುತ್ತದೆ.ಇಲ್ಲಿಗೆ ಸಮೀಪದಲ್ಲೇ ಹಲವಾರು ಕಣ್ಣಿಗೆ ಕಾಣದ ಉತ್ತಮ ಪ್ರವಾಸಿ ತಾಣವಾಗಲು ಅರ್ಹತೆ ಉಳ್ಳ ತಾಣ ಗಳಿವೆ ಅವುಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಬರೆಯುತ್ತೇನೆ. ನೀವೂ ಒಮ್ಮೆ ಕುಟುಂಬದೊಡನೆ ಹೋಗಿಬನ್ನಿ ಇಲ್ಲಿನ ಪ್ರಶಾಂತ ವಾತಾವರಣ ನಿಮಗೆ ಮುದನೀಡುತ್ತದೆ.