Adhyatma

Adhyatma Spiritualism is a dualist metaphysical belief that the world is made up of at least two fundamental substances, matter and spirit.
(19)

Spirituality is the generic term for a widely held belief system which includes spiritual awakening and living in harmony with the Universe as their main themes. Spiritual practices, including meditation, prayer and contemplation, are intended to develop an individual's inner life; spiritual experience includes that of connectedness with a larger reality, yielding a more comprehensive self; with o

ther individuals or the human community; with nature or the cosmos; or with the divine realm. Spirituality is often experienced as a source of inspiration or orientation in life. It can encompass belief in an all-pervading divine principle inherent within creation, and yet transcendent at the same time. This paradoxical approach to understanding the nature of reality follows the generic panentheistic formula whereby God, or some divine source, is All in All, and yet is not limited to even these things.

13/03/2023
🕉️ *ನರಸಿಂಹ ಜಯಂತಿ* 🕉️🔯ವೈಶಾಖ ಮಾಸದಲ್ಲಿ ಅಕ್ಷಯ ತೃತೀಯದ ನಂತರ ಬರುವ ಒಂದು ಪ್ರಮುಖ ಪರ್ವ ನರಸಿಂಹ ಜಯಂತಿ. 🔯ಪುರಾಣ ಪ್ರಸಿದ್ಧವಾದ ದಶಾವತಾರಗಳಲ್...
24/05/2021

🕉️ *ನರಸಿಂಹ ಜಯಂತಿ* 🕉️

🔯ವೈಶಾಖ ಮಾಸದಲ್ಲಿ ಅಕ್ಷಯ ತೃತೀಯದ ನಂತರ ಬರುವ ಒಂದು ಪ್ರಮುಖ ಪರ್ವ ನರಸಿಂಹ ಜಯಂತಿ.

🔯ಪುರಾಣ ಪ್ರಸಿದ್ಧವಾದ ದಶಾವತಾರಗಳಲ್ಲಿ ಶ್ರೀ ನರಸಿಂಹ ದೇವರ ಅವತಾರವು ನಾಲ್ಕನೆಯದು.

🔯ವೈಶಾಖ ಶುದ್ಧ ಚತುರ್ದಶಿಯಂದು ಸಮಸ್ತ ದೇವತೆಗಳ ಕೋರಿಕೆಯಂತೆ ದುಷ್ಟ ಹಿರಣ್ಯಕಶಿಪುವಿನ ಸಂಹರಿಸಲು ಸರ್ವೋತ್ತಮನಾದ ಶ್ರೀಮಹಾವಿಷ್ಣುವು ತಾಳಿದ ಅವತಾರವಿದು.

🔯ನೃಸಿಂಹಾತಾರದಲ್ಲಿ ಉಳಿದ ಎಲ್ಲಾ ಅವತಾರಗಳಂತೆ ದುಷ್ಟ ಶಿಕ್ಷಣ ಶಿಷ್ಟ ಪರಿಪಾಲನಗಳ ಜೊತೆಗೆ ಭಗವಂತನು ಅಸಾಧಾರಣವಾದ ತನ್ನ ನೈಜ ವಿಭೂತಿಯನ್ನು ಭಗವತ್ ತತ್ತ್ವವನ್ನೂ ಸ್ಪಷ್ಟವಾಗಿ
ಪ್ರಕಟಪಡಿಸಿದ್ದಾನೆ.

🔯ಹಿರಣ್ಯಕಶಿಪು ಸಾಮಾನ್ಯ ವ್ಯಕ್ತಿಯಲ್ಲ ; ವೈಕುಂಠವಾಸಿಯೇ ಆಗಿದ್ದು ಶಾಪಗ್ರಸ್ತನಾಗಿ ಭೂಮಿಯಲ್ಲಿ ಹುಟ್ಟಿ ಕಠಿಣ ತಪಸ್ಸಿನಿಂದ ಬ್ರಹ್ಮನಿಂದ ವರಪಡೆದು, ಮೂರು ಲೋಕಗಳನ್ನು ಗೆದ್ದ ಜಗತ್ ವಿಜೇತ.

🔯ಜನರು ಹೇಳುವ ದೇವರು ಎಂಬುದು ಇರುವುದಾದರೆ ಅದು ನಾನೇ ಅಲ್ಲದೇ ಬೇರೆ ಯಾರೂ ಇಲ್ಲ ಎಂಬ ದುರಾಗ್ರಹಿ. ಇಂಥಹವನಿಗೆ ಮಗ ಭಕ್ತಪ್ರಹ್ಲಾದ ಮಾತಿನಲ್ಲಿ ನಂಬಿಕೆ ಬರಲಿಲ್ಲ‌, ಅವನಿಗೆ ಬೇಕು ಪ್ರತ್ಯಕ್ಷ ಪ್ರತೀತಿ.

🔯ನಿನ್ನ ವಿಷ್ಣುವು ಎಲ್ಲಾ ಕಡೆ ಇರುವುದಾದರೇ ಈ ಕಂಬದಲ್ಲಿದ್ದಾನೋ? ಆಗ ನಿರ್ಭಯನಾದ ಶ್ರದ್ಧಾವಂತನಾದ ಪ್ರಹ್ಲಾದನು ಕೊಟ್ಟ ಉತ್ತರವೂ ಅಷ್ಟೇ ಸ್ಪಷ್ಟ ಹಾಗೂ ನಿಸ್ಸಂದಿಗ್ದವಾಗಿತ್ತು.

🔯ಎಲ್ಲೆಲ್ಲೂ ಇರುವವನು ಈ ಕಂಬದಲ್ಲಿ ಮಾತ್ರ ಏಕಿಲ್ಲ ಕಂಬದಲ್ಲಿ ಇಲ್ಲ ಎಂದರೆ ಭಗವಂತನ ಸರ್ವವ್ಯಾಪಕತ್ವಕ್ಕೆ ಅಡ್ಡಿ ಬರುವುದಿಲ್ಲವೇ? ಕಂಬದಲ್ಲೂ ಬಿಂಬದಲ್ಲೂ ಎಲ್ಲೆಡೆಯೂ ಇದ್ದಾನೆ, ಎಂದಾಗ ಹಿರಣ್ಯಕಶಿಪು ಕಂಬವನ್ನು ಝಾಡಿಸಿದಾಗ ಆ ಜಡ ಕಂಬದಲ್ಲಿ ಚಿನ್ಮಯನಾದ ನರಸಿಂಹ ರೂಪದಿಂದ ಭಗವಂತನು ಪ್ರಕಟಗೊಂಡು ದೈತ್ಯ ಹಿರಣ್ಯಕಶಿಪುವನ್ನು ಸಂಹಾರಗೈಯುತ್ತಾನೆ.

🔯ನರಸಿಂಹನ ಮೂರ್ತಿಯಲ್ಲಿ ಮನುಷ್ಯದೇಹ ಮತ್ತು ಸಿಂಹದ ಮುಖವನ್ನು ನೋಡುತ್ತೇವೆ. ಜೀವವಿಕಾಸವಾದ ಅನುಗುಣವಾಗಿ ದಶಾವತಾರಗಳಿಗೆ ವ್ಯಾಖ್ಯಾನ ಮಾಡುತ್ತಾ, ಕೇವಲ ಜಲಚರ ಪ್ರಾಣಿಯಾಗಿ ಮೀನು-ಮತ್ಸ್ಯಾವತಾರದಿಂದ ವಿಕಾಶದೆಶೆ ಪ್ರಾರಂಭ.

🔯ಜಲಸ್ಥಳಗಳೆರಡರಲ್ಲೂ ಸಂಚರಿಸುತ್ತಾ ಮುಂದಿನ ಘಟ್ಟ ಆಮೆ ಕೂರ್ಮಾವತಾರದ ಭಾವನೆಗೆ ಕಾರಣವಾಯ್ತು. ಅದಕ್ಕಿಂತಲೂ ಹೆಚ್ಚು ವಿಕಾಸವುಳ್ಳದಾಗಿರುವ ಘೋರ ಪರಾಕ್ರಮವುಳ್ಳ ಹಂದಿ ವರಾಹವತಾರವು ಅನಂತರ ಬರುವುದು.

🔯ಸಿಂಹಮುಖ ನರದೇಹದ ನರಸಿಂಹ ಅವತಾರದ ನಂತರ ಕೇವಲ ಮನುಷ್ಯ ರೂಪದ ವಾಮನಾವತಾರವು ಅದಕ್ಕಿಂತಲೂ ಹೆಚ್ಚಿನ ವಿಕಾಸವನ್ನು ತೋರಿಸುತ್ತದೆ. ಹೀಗೆಯೇ ಉತ್ತರೋತ್ತರ ವಿಕಾಸವಾಗಿ ಪರಶುರಾಮ, ಶ್ರೀರಾಮ, ಶ್ರೀಕೃಷ್ಣ ಮತ್ತು ಕೊನೆಗೆ ವಿಕಾಸದ ಚರಮ ಸೀಮೆಯಾದ ಬುದ್ಧನ ಅವತಾರ.

🔯ಹಿರಣ್ಯಕಶಿಪು ಬ್ರಹ್ಮನ ಬಳಿ ಕೇಳಿದ ವರದಲ್ಲೇ ಅಡಕವಾಗಿದೆ ಬ್ರಹ್ಮದೇವಾ! ನನಗೆ ಕೆಳಗಾಗಲಿ ಮೇಲಾಗಲಿ ಸಾವು ಬರಬಾರದು, ಹಗಲಾಗಲೀ ರಾತ್ರಿಯಾಗಲೀ ನಾನು ಸಾಯಬಾರದು, ಮನುಷ್ಯರಿಂದಾಗಲೀ ಪಶುಗಳಿಂದಾಗಲಿ ಮೃತ್ಯು ಬರಬಾರದು, ಅಸ್ತ್ರದಿಂದಾಗಲೀ ಶಸ್ತ್ರದಿಂದಾಗಲಿ ನಾನು ಅಜೇಯನಾಗಿರಬೇಕು, ಮನೆಯ ಒಳಗಾಗಲೀ ಹೊರಗಾಗಲಿ ಸಾವು ಬರಕೂಡದು, ಹೆಚ್ಚೇಕೆ ಬ್ರಹ್ಮಾ, ನೀನು ಸೃಷ್ಟಿಸಿದ ಯಾವುದರಿಂದಲೂ ನನಗೆ ಮರಣ ಬರಬಾರದು.

🔯ಅದರಂತೆ ಈ ವರದಿಂದಾಗಿ ಭಗವಂತನು ಮನುಷ್ಯನೂ ಅಲ್ಲ-ಪಶುವೂ ಅಲ್ಲದ ನರಸಿಂಹನಾದ ಕೆಳಗೂ ಅಲ್ಲ ಮೇಲೂ ಅಲ್ಲದೇ ತೊಡೆಯ ಮೇಲೆ ಒಳಗೂ ಅಲ್ಲ-ಹೊರಗೂ ಅಲ್ಲದ ಹೊಸ್ತಿಲಲ್ಲಿ, ರಾತ್ರಿಯೂ ಅಲ್ಲ- ಹಗಲೂ ಅಲ್ಲ ಸಂಧ್ಯಾಕಾಲದಲ್ಲಿ, ಶಸ್ತ್ರವೂ ಅಲ್ಲ ಅಸ್ತ್ರವೂ ಅಲ್ಲದ ನಖ (ಉಗುರು)ಗಳಿಂದ ಬ್ರಹ್ಮನನ್ನೇ ಸೃಷ್ಠಿಸಿದ ಭಗವಂತನು ಸ್ವ ಇಚ್ಚೆಯಿಂದ ಸಂಹರಿಸುತ್ತಾನೆ.

🔯ಸಿಂಹವು ಸಾಕ್ಷಾತ್ ಪರಾಕ್ರಮ, ತೇಜದ ಸಾಕಾರ ರೂಪ- ಎಲೆಲ್ಲಿ ಭವ್ಯತೆ ದಿವ್ಯತೆ- ಔನ್ನತ್ಯವಿದೆಯೋ ಅಲೆಲ್ಲಾ ತನ್ನ ಅಸ್ತಿತ್ವವಿದೆ ಎಂದು ಭಗವದ್ಗೀತೆಯ ವಿಭೂತಿಯೋಗದಲ್ಲಿ ಶ್ರೀಕೃಷ್ಣನೇ ಹೇಳಿಕೊಂಡಿದ್ದಾನೆ‌. ಹಿರಣ್ಯಕಶಿಪು ಎಷ್ಟೇ ಬುದ್ಧಿವಂತಿಕೆಯಿಂದ ಮರಣಬಾರದ ತರಹ ವರ ಪಡೆದಿದ್ದರೂ ಅದೆಲ್ಲವನ್ನೂ ವ್ಯರ್ಥಮಾಡಲು ಪರಮಾತ್ಮನು ಗೈದ ತಂತ್ರ ಎಂಥಹ ಅದ್ಭುತವಾದುದು. 'ದೇವರ ಬಳಿ ನಮ್ಮಗಳ ಯಾವ ಬುದ್ಧಿವಂತಿಕೆಯೂ ನಡೆಯಲಾರದು.

🔯ಆ ಬುದ್ಧಿಯನ್ನು ಕೊಡುವವನೇ ಭಗವಂತನು ಅದಕ್ಕಾಗಿಯೇ ಅವನಿಗೆ ಸರ್ವತಂತ್ರ ಸ್ವತಂತ್ರ' ಎಂದು ಹೇಳುವುದು.

🔯ಅಂತರಂಗವನ್ನು ಅಸುರಿಶಕ್ತಿಗಳು ಆಕ್ರಮಣಮಾಡಿದಾಗ ಅದು ಹಿರಣ್ಯಕಶಿಪುವಿನ ಸಭಾಸ್ತಂಭವಾಗುತ್ತದೆ. ಪ್ರಹ್ಲಾದರೂಪಿಯಾದ ಪರಿಶುದ್ಧಾತ್ಮನ ಪರಾಭಕ್ತ್ತಿಯ ಪ್ರಭಾವದಿಂದ ಪರಮಾತ್ಮ ಶ್ರೀನರಸಿಂಹನು ಪ್ರಣವ ಗರ್ಜನೆಯನ್ನು ಮಾಡುತ್ತಾ ಆ ಸ್ತಂಭವನ್ನು ಭೇಧಿಸಿಕೊಂಡು ದೈತ್ಯಭೀಕರವಾದ ರೂಪದಿಂದ ಆವಿರ್ಭವಿಸುತ್ತಾನೆ ಅಂತರಂಗದ ಮನೆಯ ಒಳ ಹೊರಗಿನ ಮಧ್ಯಸ್ಥಾನವಾದ ಹೊಸ್ತಲಿನಲ್ಲಿ ಕುಳಿತು, ಲಯವಿಕ್ಷೇಪಗಳ ಸಂಧಿಕಾಲದ ಸಂಧ್ಯಾಸಮಯದಲ್ಲಿ ಅವಿದ್ಯಾರೂಪಿಯಾದ ಅಸುರರಾಜನ ಎದೆಯನ್ನು ಸೀಳಿ ಅವನ ಸಿಂಹಾಸನವನ್ನು ಏರಿ ಕುಳಿತುಕೊಳ್ಳುತ್ತಾನೆ.

🔯ವಾಸ್ತವವಾಗಿ ಅದು ಭಗವದ್ಧ್ಯಾನ ಸಿಂಹಾಸನವೇ ಅಸುರ ಆಕ್ರಮಣದಿಂದ ಅದನ್ನು ಮುಕ್ತಗೊಳಿಸಿಲು ಅಂತರಂಗದ ಸ್ವಾಮಿಯ ಪೂಜೆಗೆ ಪ್ರಶಸ್ತವಾದ ಕಾಲವು ಸಂಧ್ಯಾಕಾಲವೇ.

🔯ಶ್ರೀ ನರಸಿಂಹ ಸ್ವಾಮಿಯ ಶಿರೋ ಕಂಠದ ಮೇಲಿರುವ ಭಾಗವು ರುದ್ರ ದೇವರ ಜಾಗ ‘‘ಆಶೀರ್ಷಂ ರುದ್ರಮೀಶಾನಂ’’ ರುದ್ರ ರೂಪಿಯಾದ ಆ ದೇವನಿಗೆ ಪ್ರದೋಷಕಾಲದಲ್ಲಿ ಪೂಜೆ ಮಾಡುವುದು ಒಳ್ಳೆಯದು .
ಓಂ ನಮೋ ನರಸಿಂಹ ಸ್ವಾಮಿ ನಮಹ🙏🏻🙏🏻

ಸರ್ವರಿಗೂ ಶೀ ಲಕ್ಷ್ಮೀ ನೃಸಿಂಹ ಸ್ವಾಮಿಯ ಶುಭತರಲಿ.

Address

Challakere
577522

Alerts

Be the first to know and let us send you an email when Adhyatma posts news and promotions. Your email address will not be used for any other purpose, and you can unsubscribe at any time.

Contact The Business

Send a message to Adhyatma:

Videos

Share


Other Challakere travel agencies

Show All