ಗೋಕರ್ಣ Gokarna

ಗೋಕರ್ಣ Gokarna ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ
(17)

*ಅ 5 ರಂದು ಶ್ರೀ ಮಹಾಬಲೇಶ್ವರ ದೇವರ ಹೊಸ್ತಿನ ಹಬ್ಬ*ಗೋಕರ್ಣ: ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವರ ಹೊಸ್ತಿನ ಹಬ್ಬವು (ನವಧಾನ್ಯ ಹರಣೋತ್ಸವ)ವು ಅ 5...
29/09/2024

*ಅ 5 ರಂದು ಶ್ರೀ ಮಹಾಬಲೇಶ್ವರ ದೇವರ ಹೊಸ್ತಿನ ಹಬ್ಬ*

ಗೋಕರ್ಣ: ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವರ ಹೊಸ್ತಿನ ಹಬ್ಬವು (ನವಧಾನ್ಯ ಹರಣೋತ್ಸವ)ವು ಅ 5 ಶನಿವಾರದಂದು ಜರುಗಲಿದೆ.

ಈ ನಿಮಿತ್ತ ಶ್ರೀ ದೇವರ ಸವಾರಿಯು ಅ 4 ಶುಕ್ರವಾರ ರಾತ್ರಿ ಗೋಕರ್ಣದಿಂದ ಹೊರಟು, ಮಿರ್ಜಾನ ಸೀಮೆ ನಾಡಕರ್ಣಿ ಮನೆತನದ ದೇವರಿರುವ ವಿವೇಕ ನಾಡಕರ್ಣಿ ಅವರ ಮನೆಗೆ ಬಂದು, ರಾತ್ರಿ ಅಷ್ಟಾವಧಾನ ಸೇವೆ ಸ್ವೀಕರಿಸಿ, ಅಲ್ಲೇ ವಾಸ್ತವ್ಯವಿರಲಿದೆ.

ಮಾರನೇ ದಿನ ಅ 5 ಶನಿವಾರದಂದು ಮುಂಜಾನೆ ನಿರ್ದಿಷ್ಟಪಡಿಸಿದ ಭಾವಿಕೊಡ್ಲ ಗ್ರಾಮದ ದೇವರ ಗದ್ದೆಗೆ ತೆರಳಿ, ಅಲ್ಲಿ ಧಾನ್ಯಲಕ್ಷ್ಮಿಗೆ ಪೂಜೆ ಸಲ್ಲಿಸಿ, ನೂತನ ಕದಿರಿನೊಂದಿಗೆ ಪುನಃ ವಿವೇಕ ನಾಡಕರ್ಣಿಯವರ ಮನೆಗೆ ಬರಲಿದೆ. ಅಲ್ಲಿ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಂತರ ಗೋಕರ್ಣ ಮಂಡಲದಲ್ಲಿರುವ ಸಮಸ್ತ ದೇವತೆಗಳ ಹೆಸರನ್ನು ಹೇಳಿ ಶ್ರೀ ದೇವರ ಪಾದುಕೆಯ ಮೇಲೆ ಹೊಸಕ್ಕಿಯನ್ನು ವಿವೇಕ ನಾಡಕರ್ಣಿಯವರು ಅರ್ಪಿಸುವರು.

ನಂತರ ಭಕ್ತರಿಗೆ ಹೊಸಕ್ಕಿ ಪ್ರಸಾದ ವಿತರಿಸಿ, ಶ್ರೀ ದೇವರ ಸವಾರಿಯು ಗೋಕರ್ಣಕ್ಕೆ ತೆರಳುವುದು. ಈ ಸಂದರ್ಭದಲ್ಲಿ ಶ್ರೀ ದೇವರ ಪಾದುಕೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುವ ‘ಉಪಾಧಿ’ಯು ವಿವೇಕ ನಾಡಕರ್ಣಿಯವರ ಕುಟುಂಬಕ್ಕೆ ಇರುವುದು ವಿಶೇಷವಾಗಿದೆ. ಸಂಪ್ರದಾಯದಂತೆ ಭತ್ತದ ಕದನ ಬೆಳವಣಿಗೆ ಆದಮೇಲೆ, ನಾಡಕರ್ಣಿಯವರು ದೇವಸ್ಥಾನಕ್ಕೆ ಪತ್ರ ಬರೆದು ವಿನಂತಿ ಮಾಡಿಕೊಂಡ ನಂತರ ,ಸಂಸ್ಥಾನದಿಂದ ವಿವೇಕ ನಾಡ್ಕರ್ಣಿಯವರಿಗೆ ರಾಯಸ ಬಂದಮೇಲೆ, ಮಿರ್ಜಾನ ಸೀಮೆಯ ಎಲ್ಲಾ ಕಡೆಗೆ ರಾಯಸ ಕಳಿಸುವ ಪರಿಪಾಠವಿದೆ. ಅಲ್ಲದೇ ಶ್ರೀ ದೇವರ ಪಾದಕ್ಕೆ ಅರ್ಪಿಸುವ ಹೊಸಕ್ಕಿಯನ್ನು ಬಾವಿಕೊಡ್ಲ ಗ್ರಾಮದ ನಿರ್ದಿಷ್ಟ ಕುಟುಂಬದವರು ತಂದುಕೊಡುತ್ತಿದ್ದು, ಅವರ ಕುಟುಂಬವನ್ನು "ಹೊಸಕ್ಕಿಗೌಡರ ಮನೆತನ" ಅಂತಲೇ ಕರೆಯಲಾಗುತ್ತದೆ.
ಐತಿಹಾಸಿಕ ಈ ಹಬ್ಬಕ್ಕೆ ಸಮಸ್ತ ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಪ್ರಸಾದ ಹೊಸಕ್ಕಿ ಸ್ವೀಕರಿಸಿ ಶ್ರೀ ಮಹಾಬಲೇಶ್ವರನ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ವಿವೇಕ ನಾಡಕರ್ಣಿಯವರು ಕೋರಿರುತ್ತಾರೆ.

12/01/2023

ಗೋಕರ್ಣ

ಕೋಟಿತೀರ್ಥ ...

Welcome to Gokarna Car Festival
28/02/2022

Welcome to Gokarna Car Festival

28/02/2022
16/02/2022
05/01/2022
20/12/2021
12/04/2021
13/11/2019

ಹರ ಹರ ಮಹಾದೇವ

" *ದೇವಾಲಯದಲ್ಲಿ ನಾವು ಮಾಡೋ ಅಪರಾಧಗಳು*..೧. ಭಗವಂತನ ಮಂದಿರಕ್ಕೆ ಕೈಕಾಲು ತೊಳೆಯದೇ ಪ್ರವೇಶ ಮಾಡುವುದು.೨.ಭಗವಂತನ ಮಂದಿರಕ್ಕೆ ಸಾಕ್ಸ್ ಹಾಕಿಕೊಂ...
18/10/2018

" *ದೇವಾಲಯದಲ್ಲಿ ನಾವು ಮಾಡೋ ಅಪರಾಧಗಳು*..

೧. ಭಗವಂತನ ಮಂದಿರಕ್ಕೆ ಕೈಕಾಲು ತೊಳೆಯದೇ ಪ್ರವೇಶ ಮಾಡುವುದು.

೨.ಭಗವಂತನ ಮಂದಿರಕ್ಕೆ ಸಾಕ್ಸ್ ಹಾಕಿಕೊಂಡು ಪ್ರವೇಶ ಮಾಡುವುದು.

೩.ಭಗವಂತನ ಮಂದಿರಕ್ಕೆ ಪ್ರವೇಶಮಾಡುವಾಗ ಶೂ,ಸಾಕ್ಸ್ ಕೈಯಿಂದ ತೆಗೆದು,ಕೈ ತೊಳೆಯದೇ ಪ್ರವೇಶ ಮಾಡುವುದು.

೪.ಭಗವಂತನ ಮಂದಿರಕ್ಕೆ ಸಿಗರೇಟು,ಬೀಡಾ,ಸರಾಯಿ,ಮಾಂಸ ಸೇವಿಸಿ ಪ್ರವೇಶಿಸುವದು.

೫.ಭಗವಂತನ ಮಂದಿರಕ್ಕೆ ಚರ್ಮದ ಬೆಲ್ಟ್,ಚಪ್ಪಲಿ,ಕೈ ಚೀಲ ಧರಿಸಿ ಕೊಂಡು ಹೋಗುವುದು.

೬.ಭಗವಂತನ ಎದುರು ಸನ್ಮಾನ ಮಾಡಿಸಿಕೊಳ್ಳುವುದು.

೭.ಭಗವಂತನಿಗೆ ಕೆಟ್ಟ/ಕೊಳೆತ/ಒಣಗಿದ ಹಣ್ಣುಗಳನ್ನು ಅರ್ಪಿಸುವುದು.

೮.ಭಗವಂತನ ಮಂದಿರದಲ್ಲಿ ಭಕ್ತರಿಂದ ಹಣ ಪಡೆದು ಕಳಪೆ/ಕಡಿಮೆ ಗುಣ ಮಟ್ಟದ ಪೂಜಾ ಸಾಮಗ್ರಿಗಳನ್ನು ದೇವರಿಗೆ ಅರ್ಪಿಸುವುದು.

೯.ದೇವಾಲಯದ ಹೊಸ್ತಿಲು,ಕಿಟಕಿಗಳಲ್ಲಿ ಕರ್ಪೂರ ಹಚ್ಚುವುದು.

೧೦.ದೇವಾಲಯಕ್ಕೆ ಅರ್ಪಿಸಿದ ಸಾಮಾಗ್ರಿಗಳನ್ನು ಅಂಗಡಿಗಳಿಗೆ ಮಾರಿ ಮತ್ತೆ ಅದೇ ಸಾಮಾಗ್ರಿಗಳನ್ನು ಬೇರೆ ಭಕ್ತರ ಮೂಲಕ ದೇವರಿಗೆ ಅರ್ಪಿಸುವುದು.

೧೧.ದೇವಾಲಯದ ಆಸ್ತಿಗಳನ್ನು ಪರಭಾರೆ ಮಾಡುವುದು.ದೇವರ ಹುಂಡಿ,ಕಾಣಿಕೆ ಹಣ ದುರುಪಯೋಗ ಮಾಡುವುದು.

೧೨.ದೇವರಿಗೆ ಸಂಭಂದಿಸಿದ ಉತ್ಸವ, ರಥಯಾತ್ರೆಗಳಲ್ಲಿ ಭಾಗವಹಿಸದಿರುವುದು ಮತ್ತು ಅವುಗಳ ದರ್ಶನ ಪಡೆಯದಿರುವುದು..

೧೩.ಭಗವಂತನ ಸಮ್ಮುಖ ಹೋಗಿ ದೇವರ ದರ್ಶನ ಪಡೆಯದಿರುವುದು.

೧೪. ಒಂದೇ ಹಸ್ತದಿಂದ ನಮಸ್ಕರಿಸುವುದು.

೧೫. ಭಗವಂತನ ಸಮ್ಮುಖ ದಲ್ಲಿ ನಿಂತಂತೆಯೇ ಪ್ರದಕ್ಷಿಣೆ ಮಾಡುವುದು. , ನೆಲಕ್ಕೆ ಬಾಗಿ ನಮಸ್ಕಾರ ಮಾಡದೇ ಇರುವುದು.

೧೬. ದೇವಾಲಯಕ್ಕೆ ಪ್ರದಕ್ಷಿಣೇ ಬರದೇ ಇರುವುದು..

೧೭. ಭಗವಂತನ ಎದುರು ಕಾಲುಚಾಚಿ ಕುಳಿತುಕೊಳ್ಳುವುದು ಮತ್ತು ಕುರ್ಚಿ , ಆಸನಗಳ ಮೇಲೆ ಕುಳಿತುಕೊಳ್ಳುವುದು..

೧೮. ಭಗವಂತನ ಸಮ್ಮುಖ ಭೋಜನ ಮಾಡುವುದು..

೧೯. ದೇವಾಲಯದಲ್ಲಿ ಅಸತ್ಯ ನುಡಿಯುವುದು ಮತ್ತು ಅನಗತ್ಯ ವಿಚಾರ ಮಾತಾಡುವುದು..

೨೦. ದೇವಾಲಯದಲ್ಲಿ ಜೋರಾಗಿ ಮಾತಾಡೋದು , ಅಪಭ್ರಂಶ ಮಾತನಾಡುವುದು..

೨೧. ದೇವಾಲಯದಲ್ಲಿ ಬೇರೆಯವರಿಗೆ ಕೆಡುಕನ್ನು ಬಯಸುವುದು..

೨೨.ವಸ್ತುಗಳನ್ನು ದೇವಾಲಯಕ್ಕೆ ಕೊಟ್ಟು , ದಾನಿಗಳು ಅಂತ ತಮ್ಮ ಹೆಸರು ಹಾಕಿಸಿಕೊಳ್ಳುವುದು..

೨೩. ಭಗವಂತನ ಸಮ್ಮುಖ ಆಕಳಿಸುವುದು ಮತ್ತು ಅಧೋವಾಯುವನ್ನು ತ್ಯಜಿಸುವುದು..

೨೪. ತುಂಬಾ ಸಾಮರ್ಥ್ಯವಿದ್ದರೂ ಯಾವುದೇ ಸೇವೆ ಮಾಡದೇ ಇರುವುದು..

೨೫. ಯಾವ ಋತುವಿನ ಫಲವೇ ಆಗಲಿ ದೇವರಿಗೆ ಅರ್ಪಿಸದೇ ಸೇವಿಸುವುದು..

೨೬. ಭಗವಂತನ ಸಮ್ಮುಖ ದೇವರಿಗೆ ನಮಸ್ಕರಿಸದೇ ಅನ್ಯರಿಗೇ ನಮಸ್ಕರಿಸುವುದು..

೨೭. ನಿಮ್ಮನ್ನು ನೀವೇ ಪ್ರಶಂಸೆ ಮಾಡಿಕೊಳ್ಳುವುದು..

೨೮. ದೇವರ ಪ್ರಸಾದ ಸ್ವೀಕರಿಸದೇ ಬರುವುದು.

೨೯. ಯಾವುದೇ ದೇವರನ್ನು ನಿಂದಿಸುವುದು..

೩೦. ಭಗವಂತನ ವಿಗ್ರಹಕ್ಕೆ ಬೆನ್ನುತೋರಿಸಿ ಕೂಡುವುದು..

೩೧. ಗುರುಗಳ ಸ್ಮರಣೆ ಮಾಡದೇ ಇರುವುದು..

೩೨. ಅಶೌಚವಿದ್ದಾಗ ದೇವಾಲಯ ಪ್ರವೇಶ ಮಾಡುವುದು..

೩೩.ದೇವಾಲಯದಲ್ಲಿ ಕಣ್ಣು,ಕಿವಿ,ಮೂಗುಗಳಲ್ಲಿ ಬೆರಳು ಹಾಕಿ ಕಸ ತೆಗೆಯುವುದು.

೩೪.ದೇವಾಲಯದಲ್ಲಿ ಉಗುರು ಕಡಿಯುವುದು,ಕತ್ತರಿಸುವುದು.

೩೫.ದೇವಾಲಯದಲ್ಲಿ ನೀಡಿದ ಪ್ರಸಾದ ರೂಪದ ಹಣ್ಣು,ಕಾಯಿ,ಹೂವು,ಇತ್ಯಾದಿಗಳನ್ನು ಅಲ್ಲಿಯೇ ದೊಡ್ಡಸ್ತಿಕೆಯಿಂದ ಬೇರೆಯವರಿಗೆ,ಬಿಕ್ಷುಕರಿಗೆ ನೀಡುವುದು.

೩೬.ದೇವಾಲಯದ ಹೊರಗೆ ಕುಳಿತಿರುವ ಬಿಕ್ಷುಕರಿಗೆ ಬಿಕ್ಷೆ ನೀಡಿ ಬಿಕ್ಷಾವೃತ್ತಿಯನ್ನು ಉತ್ತೇಜಿಸುವುದು.

೩೭.ದೇವಾಲಯದ ದರ್ಶನದ ಅವಧಿ ಮುಗಿದಿದ್ದರೂ ಬಾಗಿಲು ತೆರೆಸಿ ದರ್ಶನ ಪಡೆಯುವುದು.

೩೮.ದೇವಾಲಯದ/ಧಾರ್ಮಿಕ ಸಂಸ್ಥೆಗಳ ಅಭಿವೃಧ್ದಿ ಕಾರ್ಯಗಳಿಗೆ ಅಡ್ಡಿ ಬರುವುದು.

೩೯.ದೇವರ ಸನ್ನಿಧಾನದಲ್ಲಿ ಪೂಜೆಗಳು ನಡೆಯುವಾಗ ಮುಂದಿನ ಸ್ಥಾನಗಳನ್ನು ಆಕ್ರಮಿಸಿ ಬೇರೆ ಭಕ್ತಾದಿಗಳಿಗೆ ದರ್ಶನಕ್ಕೆ ಅಡ್ಡಿಪಡಿಸುವುದು.

೪೦.ದೇವಾಲಯದ ಗರ್ಭಗುಡಿಯ ಮೂರ್ತಿಗಳನ್ನು ಮಡಿ ಉಡದೆ ಮುಟ್ಟುವುದು/ ಅದಕ್ಕೆ ಅವಕಾಶ ಮಾಡಿ ಕೊಡುವುದು.

೪೧.ದೇವಾಲಯದ ಗರ್ಭಗುಡಿ ಬಾಗಿಲು ಹಾಕುವಾಗ ನಂದಾ ದೀಪ ಆರಿಸಿ ಎಣ್ಣೆ ಉಳಿಸುವುದು.

೪೨.ದೇವರಿಗೆ ಅರ್ಪಿಸುವ ಮೊದಲು ಹೂವು.ಹಣ್ಣು,ಊದು ಬತ್ತಿಗಳನ್ನು ಆಘ್ರಾಣಿಸುವುದು(ಮೂಸಿ ನೋಡುವುದು).

೪೩.ದೇವಾಲಯದ ಆಸ್ತಿಗಳನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬಾಡಿಗೆಗೆ ಪಡೆಯುವುದು/ಕೊಡುವುದು.ಕಡಿಮೆ ಬಾಡಿಗೆಗೆ ಪಡೆದು ಹೆಚ್ಚನ ಬಾಡಿಗೆಗೆ ಬೇರೆಯವರಿಗೆ ನೀಡುವುದು.

೪೪.ದೇವಾಲಯದ ಆಸ್ತಿಗಳ ಮೇಲೆ ಹಕ್ಕು ಸಾಧಿಸುವುದು.

೪೫.ದೇವರ ಆಭರಣ ದುರುಪಯೋಗ ಮಾಡಿಕೊಳ್ಳುವುದು.

****ಇತ್ಯಾದಿ
ನಮಗೆ ಗೊತ್ತಿದ್ದೂ/ ಗೊತ್ತಿಲ್ಲದಿದೆಯೋ ಮಾಡುತ್ತಿದ್ದೇವೆ..

ಈ ಅಂಶಗಳನ್ನು ಎಚ್ಚರಿಕೆಯಾಗಿ ದೇವಾಲಯಗಳಲ್ಲಿ ಪ್ರಚಾರ ಮಾಡಿ ದಯವಿಟ್ಡು ನಮ್ಮ ಸಂಸ್ಕೃತಿಯನ್ನು ಉಳಿಸಿರಿ..
Forwarded massage

ಶ್ರಿ ಕ್ಷೇತ್ರ ಗೋಕರ್ಣದಲ್ಲಿ ಬದಲಾವಣೆಯ ಪರ್ವ
16/10/2018

ಶ್ರಿ ಕ್ಷೇತ್ರ ಗೋಕರ್ಣದಲ್ಲಿ ಬದಲಾವಣೆಯ ಪರ್ವ

*ಶ್ರೀ ಮಹಾಬಲೇಶ್ವರ ದೇವರ ಹೊಸ್ತಿನ ಹಬ್ಬ*ಗೋಕರ್ಣ: ಇಲ್ಲಿನ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವರ ಹೊಸ್ತಿನ ಹಬ್ಬವು (ನವಧಾನ್ಯ ಹರಣೋತ್ಸವ)ವು ಅಕ್ಟೋ...
01/10/2018

*ಶ್ರೀ ಮಹಾಬಲೇಶ್ವರ ದೇವರ ಹೊಸ್ತಿನ ಹಬ್ಬ*
ಗೋಕರ್ಣ: ಇಲ್ಲಿನ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವರ ಹೊಸ್ತಿನ ಹಬ್ಬವು (ನವಧಾನ್ಯ ಹರಣೋತ್ಸವ)ವು ಅಕ್ಟೋಬರ್ 11 ರಂದು ಗುರುವಾರ ಜರುಗಲಿದೆ.
ಈ ನಿಮಿತ್ತ ಶ್ರೀ ದೇವರ ಸವಾರಿಯು ಅಕ್ಟೋಬರ್ 10ರ ರಾತ್ರಿ ಗೋಕರ್ಣದಿಂದ ಹೊರಟು, ಮಿರ್ಜಾನ ಸೀಮೆ ನಾಡಕರ್ಣಿ ಮನೆತನದ ದೇವರಿರುವ ವಿವೇಕ ನಾಡಕರ್ಣಿ ಅವರ ಮನೆಗೆ ಬಂದು, ರಾತ್ರಿ ಅಷ್ಟಾವಧಾನ ಸೇವೆ ಸ್ವೀಕರಿಸಿ, ಅಲ್ಲೇ ವಾಸ್ತವ್ಯವಿದ್ದು ಮಾರನೇ ದಿನ ಅಕ್ಟೋಬರ್ 11ರಂದು ಮುಂಜಾನೆ ನಿರ್ದಿಷ್ಟಪಡಿಸಿದ ಭಾವಿಕೊಡ್ಲ ಗ್ರಾಮದ ದೇವರ ಗದ್ದೆಗೆ ತೆರಳಿ, ಅಲ್ಲಿ ಧಾನ್ಯಲಕ್ಷ್ಮಿಗೆ ಪೂಜೆ ಸಲ್ಲಿಸಿ, ನೂತನ ಕದಿರಿನೊಂದಿಗೆ ಪುನಃ ವಿವೇಕ ನಾಡಕರ್ಣಿಯವರ ಮನೆಗೆ ಬರಲಿದೆ. ಅಲ್ಲಿ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಂತರ ಗೋಕರ್ಣ ಮಂಡಲದಲ್ಲಿರುವ ಸಮಸ್ತ ದೇವತೆಗಳ ಹೆಸರನ್ನು ಹೇಳಿ ಶ್ರೀ ದೇವರ ಪಾದುಕೆಯ ಮೇಲೆ ಹೊಸಕ್ಕಿಯನ್ನು ವಿವೇಕ ನಾಡಕರ್ಣಿಯವರು ಅರ್ಪಿಸುವರು.
ನಂತರ ಭಕ್ತರಿಗೆ ಹೊಸಕ್ಕಿ ಪ್ರಸಾದ ವಿತರಿಸಿ, ಶ್ರೀ ದೇವರ ಸವಾರಿಯು ಗೋಕರ್ಣಕ್ಕೆ ತೆರಳುವುದು. ಈ ಸಂದರ್ಭದಲ್ಲಿ ಶ್ರೀ ದೇವರ ಪಾದುಕೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುವ ‘ಉಪಾಧಿ’ಯು ವಿವೇಕ ನಾಡಕರ್ಣಿಯವರ ಕುಟುಂಬಕ್ಕೆ ಇರುವುದು ವಿಶೇಷವಾಗಿದೆ. ಈ ಹೊಸ್ತಿನ ಹಬ್ಬದ ಬಗ್ಗೆ ದೇವಸ್ಥಾನಕ್ಕೆ ಹಾಗೂ ನಾಡಕರ್ಣಿ ಕುಟುಂಬಕ್ಕೆ 18ನೇ ಶತಮಾನದಲ್ಲಿ ದಸ್ತಾವೇಜು ನೋಂದಣಿ ಆಗಿದ್ದು, ಕುಟುಂಬದಿಂದ ಶ್ರೀ ದೇವಸ್ಥಾನಕ್ಕೆ ಉಪ್ಪಿನ ಆಗರ ನೀಡಿರುವುದು ದಾಖಲೆಗಳಿಂದ ಕಂಡುಬರುತ್ತದೆ. ಇದಲ್ಲದೇ ದಿನನಿತ್ಯದ ಅಮೃತಪಡಿ ಹಾಗೂ ವಾದ್ಯಸೇವೆ ಕೂಡ ಈ ಕುಟುಂಬದಿಂದಲೇ ನಡೆಯುವಂತೆ ಈ ದಸ್ತಾವೇಜಿನಲ್ಲಿ ನಮೂದಾಗಿರುತ್ತದೆ.
ನೂರಾರು ವರ್ಷಗಳ ಇತಿಹಾಸವಿರುವ ಈ ಹೊಸ್ತಿನ ಹಬ್ಬದ ‘ರಾಯಸ’ವು ಶ್ರೀ ಸಂಸ್ಥಾನದಿಂದ ವಿವೇಕ ನಾಡಕರ್ಣಿಯವರಿಗೆ ಬಂದ ನಂತರ, ಮಿರ್ಜಾನ ಸೀಮೆಯ ಎಲ್ಲಾ ಕಡೆಗೆ ರಾಯಸ ಕಳಿಸುವ ಪರಿಪಾಠ ನಾಡಕರ್ಣಿ ಕುಟುಂಬಕ್ಕೆ ಇರುವುದು ವಿಶೇಷವಾಗಿದೆ.
ಐತಿಹಾಸಿಕ ಈ ಹಬ್ಬಕ್ಕೆ ಸಮಸ್ತ ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಪ್ರಸಾದ ಹೊಸಕ್ಕಿ ಸ್ವೀಕರಿಸಿ ಶ್ರೀ ಮಹಾಬಲೇಶ್ವರನ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ವಿವೇಕ ನಾಡಕರ್ಣಿ ಹಾಗೂ ಅಮಿತ ನಾಡಕರ್ಣಿಯವರು ಕೋರಿದ್ದಾರೆ.
*ಶ್ರೀ ಮಹಾಬಲೇಶ್ವರ ದೇವಸ್ಥಾನವನ್ನು ಮಾನ್ಯ ಸರ್ಕಾರವು ಹಸ್ತಾಂತರ ಪಡಿಸಿಕೊಂಡ ನಂತರ ನಡೆಯುವ ಪ್ರಪ್ರಥಮ ಉತ್ಸವವಾಗಿರುತ್ತದೆ.*

Jai ho
21/09/2018

Jai ho

Address

Gokarna
Gokarn
581326

Telephone

+917795959293

Website

Alerts

Be the first to know and let us send you an email when ಗೋಕರ್ಣ Gokarna posts news and promotions. Your email address will not be used for any other purpose, and you can unsubscribe at any time.

Videos

Share


Other Tourist Information in Gokarn

Show All